HomeLatest NewsBREAKING: ಶಬರಿಮಲೆ ದೇವಸ್ಥಾನದ ಚಿನ್ನ ಕಳುವು ಪ್ರಕರಣ: ಪೊಟ್ಟಿ ಉನ್ನಿಕೃಷ್ಣನ್ ಬೆಂಗಳೂರು ನಿವಾಸದ ಮೇಲೆ SIT...

BREAKING: ಶಬರಿಮಲೆ ದೇವಸ್ಥಾನದ ಚಿನ್ನ ಕಳುವು ಪ್ರಕರಣ: ಪೊಟ್ಟಿ ಉನ್ನಿಕೃಷ್ಣನ್ ಬೆಂಗಳೂರು ನಿವಾಸದ ಮೇಲೆ SIT ದಾಳಿ

ಬೆಂಗಳೂರು: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದ 4 ಕೆ.ಜಿ.ಚಿನ್ನಾಭರಣ ಕಳುವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಕೇರಳ ಎಸ್ ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

ಪ್ರಕರಣ ಸಂಬಂಧ ತಿರುವಾಂಕೂರು ದೇವಸ್ವಯಂ ಮಂಡಳಿ ಮಾಜಿ ಬಿ.ಮುರಾರಿ ಬಾಬು ಅವರನ್ನು ಎಸ್ ಐಟಿ ಬಂಧಿಸಿತ್ತು. ಶಬರಿಮಲೆ ದೇವಸ್ಥಾನದ ಚಿನ್ನ ದುರುಪಯೋಗ ಪ್ರಕರಣದಲ್ಲಿ ಆರೋಪಿ ಪೊಟ್ಟಿ ಉನ್ನಿಕೃಷ್ಣನನ್ನು ಎಸ್ ಐಟಿ ಬಂಧಿಸಿದೆ. ಇದೇ ವೇಳೆ ಬೆಂಗಳೂರಿನ ಅವರ ನಿವಾಸದ ಮೇಲೆ ಮತ್ತೊಮ್ಮೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಶ್ರೀರಾಮ್ ಪುರ ಪೊಲೀಸರ ಸಹಕಾರದಿಂದ ಕೇರಳ ಎಸ್ ಐಟಿ ಅಧಿಕಾರಿಗಳು ಪೊಟ್ಟಿ ಉನ್ನಿಕೃಷ್ಣನ್ ನಿವಾಸದ ಮೇಲೆ ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular