HomeLive NewsBREAKING : ಕರ್ನೂ‍ಲ್ ಖಾಸಗಿ ಬಸ್ 'ಅಗ್ನಿ ದುರಂತ' ಕೇಸ್ : ನಕಲಿ ಅಂಕಪಟ್ಟಿ ನೀಡಿ...

BREAKING : ಕರ್ನೂ‍ಲ್ ಖಾಸಗಿ ಬಸ್ ‘ಅಗ್ನಿ ದುರಂತ’ ಕೇಸ್ : ನಕಲಿ ಅಂಕಪಟ್ಟಿ ನೀಡಿ D.L ಪಡೆದಿದ್ದ ಚಾಲಕ ಅರೆಸ್ಟ್.!

ಆಂಧ್ರಪ್ರದೇಶ : ಕರ್ನೂಲ್ ಖಾಸಗಿ ಬಸ್ ಅಗ್ನಿ ದುರಂತದಲ್ಲಿ 20 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಚಾಲಕ ಲಕ್ಷ್ಮಯ್ಯ ಪಲ್ಯಾಡ್ ನಗರದ ನಿವಾಸಿ ಎಂದು ಗುರುತಿಸಲಾಗಿದೆ. ಈತ ನಕಲಿ ಅಂಕಪಟ್ಟಿ ನೀಡಿ ಡ್ರೈವಿಂಗ್ ಲೈಸೆನ್ಸ್ ಪಡೆದಿದ್ದನು ಎನ್ನಲಾಗಿದೆ. 10 ನೇ ತರಗತಿ ಪಾಸ್ ಆಗಿರೋ ನಕಲಿ ಅಂಕಪಟ್ಟಿ ಸಲ್ಲಿಸಿ ಡಿಎಲ್ ಪಡೆದಿದ್ದನು ಎಂಬ ವಿಚಾರ ತನಿಖೆಯಲ್ಲಿ ಬಯಲಾಗಿದೆ. ಬಸ್ ಚಾಲಕನನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕರ್ನೂಲ್ ಬಳಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬಸ್ ಹೊತ್ತಿ ಉರಿದಿದ್ದು, 19 ಪ್ರಯಾಣಿಕರು ಸಜೀವದಹನವಾಗಿದ್ದರು. ಬೈಕ್ ಸವಾರ ಕೂಡ ಅಪಘಾತದಲ್ಲಿ ಮೃತಪಟ್ತಿದ್ದು ಒಟ್ಟು 20 ಜನರು ಸಾವನ್ನಪ್ಪಿದ್ದಾರೆ, 12 ಜನರು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದುರಂತದಲ್ಲಿ ಮೃತಪಟ್ಟಿರುವ ಕುಟುಂಬಗಳಿಗೆ ಆಂಧ್ರಪ್ರದೇಶ ಸಾರಿಗೆ ಸಂಸ್ಥೆ ತಲಾ 5 ಲಕ್ಷ ಪರಿಹಾರ ಘೋಷಿಸಿದೆ.ಗಾಯಾಳುಗಳಿಗೆ ತಲಾ 2 ಲಕ್ಷ ಪರಿಹಾರ ಘೋಷಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular