‘ವೈದ್ಯಕೀಯ’ ಕೋರ್ಸ್ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ: ಯುಜಿ ನೀಟ್ 3ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ, ಕೆಲವು ಸ್ಪಷ್ಟನೆ ಪ್ರಕಟ

ಬೆಂಗಳೂರು: ಯುಜಿ ನೀಟ್ 3ನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶ ಪ್ರಕಟಿಸಿದ್ದು, ಕೆಲವು ಸ್ಪಷ್ಟನೆಗಳನ್ನೂ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಒಮ್ಮೆ ನೋಡಿ ತಮ್ಮ ಅನುಮಾನಗಳನ್ನು ದೂರ ಮಾಡಿಕೊಳ್ಳಿ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

1. ವೈದ್ಯಕೀಯ ಮತ್ತು ದಂತವೈದ್ಯಕೀಯ ಸೀಟುಗಳ ಹಂಚಿಕೆಯ 3ನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ದಿನಾಂಕ 24-10-2025 ರಂದು ಪ್ರಕಟಿಸಲಾಗಿದೆ.

2. ಅಭ್ಯರ್ಥಿಗಳಿಗೆ ತಿಳಿದಿರುವಂತೆ ಹೊಸದಾಗಿ 9 ಕಾಲೇಜುಗಳಲ್ಲಿ 443 ವೈದ್ಯಕೀಯ ಸೀಟುಗಳು ಸೇರ್ಪಡೆಯಾದ ಕಾರಣದಿಂದ ಮೊದಲನೇ ಹಾಗು ಎರಡನೇ ಸುತ್ತಿನಲ್ಲಿ ಹಂಚಿಕೆಯ ನಂತರ ಕಾಲೇಜಿಗೆ ವರದಿ ಮಾಡಿದ್ದ ಅಭ್ಯರ್ಥಿಗಳನ್ನೂ ಸಹ 443 ವೈದ್ಯಕೀಯ ಸೀಟುಗಳಿಗೆ ಮಾತ್ರ ಅಸಕ್ತಿ ಇದ್ದಲ್ಲಿ ಭಾಗವಹಿಸಲು ತಿಳಿಸಲಾಗಿತ್ತು.

3. 3ನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಮೊದಲಿಗೆ ಹೊಸದಾಗಿ ಸೇರ್ಪಡೆಯಾದ 9 ಕಾಲೇಜುಗಳ 443 ಸೀಟುಗಳನ್ನು ಪಡೆದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರತ್ಯೇಕವಾಗಿ ಪಾರದರ್ಶಕತೆಯ ನಿಟ್ಟಿನಲ್ಲಿ ಅಭ್ಯರ್ಥಿಗಳ ಮಾಹಿತಿಗೆ ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ಮೊದಲನೇ ಹಾಗು ಎರಡನೇ ಸುತ್ತಿನ ಅಭ್ಯರ್ಥಿಗಳೊಂದಿಗೆ ಯಾವುದೇ ಸೀಟು ಹಂಚಿಕೆಯಾಗದೆ 3ನೇ ಸುತ್ತಿನಲ್ಲಿ ಭಾಗವಹಿಸಿ 9 ಕಾಲೇಜುಗಳ 443 ಸೀಟುಗಳನ್ನು ಸೀಟು ಪಡೆದ ಅಭ್ಯರ್ಥಿಗಳೂ ಸಹ ಸೇರಿರುತ್ತಾರೆ.

4. ಪ್ರವೇಶ ಪಡೆದ ವಿದ್ಯಾರ್ಥಿಗಳು ಹೊಸದಾಗಿ ಸೇರ್ಪಡೆಯಾದ 9 ಕಾಲೇಜುಗಳ 443 ಸೀಟುಗಳನ್ನು ಪಡೆದಾಗ ಅವರು ಬಿಡುವ ಸೀಟುಗಳನ್ನು ಇಲ್ಲಿಯವರೆಗೆ ಸೀಟುಗಳನ್ನು ಪಡೆಯದೆ 3ನೇ ಸುತ್ತಿನಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳಿಗೆ ಮಾತ್ರ ಹಂಚಿಕೆ ಮಾಡಲಾಗಿರುತ್ತದೆ.

5. 3ನೇ ಸುತ್ತಿನಲ್ಲಿ ಲಭ್ಯವಿದ್ದ ಇತರೆ ಸೀಟುಗಳ ಹಂಚಿಕೆಯ ಮುಂದಿನ ಪ್ರಕ್ರಿಯೆಯಲ್ಲಿ (Next Iteration) ಯಾವುದೇ ಸೀಟು ಹಂಚಿಕೆಯಾಗದ ಅಭ್ಯರ್ಥಿಗಳ ಮೆರಿಟ್ ಹಾಗೂ ಇಚ್ಚೆಗಳ ಆಧಾರದ ಮೇಲೆ ಸೀಟು ಆಪ್ ಗ್ರಡೇಶನ್ ಆಗಿ ಒಟ್ಟಾರೆಯಾಗಿ ಪ್ರಕಟಿಸಿರುವ 967 ಅಭ್ಯರ್ಥಿಗಳ ಪಟ್ಟಿಯಲ್ಲಿರುವ ವೈದ್ಯಕೀಯ ಸೀಟು ಹಂಚಿಕೆಯಾಗಿರುತ್ತದೆ. ಆದ್ದರಿಂದ 967 ಅಭ್ಯರ್ಥಿಗಳ ಪಟ್ಟಿಯಲ್ಲಿರುವ ವೈದ್ಯಕೀಯ ಸೀಟುಗಳು 3ನೇ ಸುತ್ತಿನಲ್ಲಿ ತಾತ್ಕಾಲಿಕವಾಗಿ ಹಂಚಿಕೆಯಾಗಿರುವ ಸೀಟುಗಳು ಎಂದು ಪರಿಗಣಿಸುವುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read