ಹಾವೇರಿ: ನೀರು ತುಂಬಿದ್ದ ಬಕೆಟ್ ಗೆ ಬಿದ್ದು 14 ತಿಂಗಳ ಮಗು ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲಾಸ್ಪತ್ರೆಯ ಬಳಿ ನಡೆದಿದೆ.
ಮನೆ ಮುಂಭಾಗದಲ್ಲಿ ಆಟವಾಡುತ್ತಿದ್ದ ಮಗು ಎದುರು ಮನೆಯ ನೀರು ತುಂಬಿದ್ದ ಬಕೆಟ್ ಗೆ ಬಿದ್ದು ಸಾವನ್ನಪ್ಪಿದೆ. ದಕ್ಷಿತ್ ಮೃತ ಮಗು. ಮಗು ಬಕೆಟ್ ನಲ್ಲಿ ತಲೆ ಕೆಳಗಾಗಿ ಬಿದ್ದಿದೆ. ಬಕೆಟ್ ನಲ್ಲಿ ಕಾಲು ನೋಡಿದ ಪೋಷಕರು ಮಗುವನ್ನು ಮೇಲಕೆತ್ತಿದ್ದಾರೆ. ಅಷ್ಟರಲ್ಲಿ ಮಗು ಸಾವನ್ನಪ್ಪಿತ್ತು.
ಹಾವೇರಿ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
