ಬಿಎಸ್‌ಎನ್‌ಎಲ್ ಗ್ರಾಹಕರಿಗೆ ಭರ್ಜರಿ ಕೊಡುಗೆ: ಭಾರೀ ರಿಯಾಯಿತಿ, ಇ-ಸಿಮ್ ಸೌಲಭ್ಯ

 ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ವತಿಯಿಂದ ದೀಪಾವಳಿ ಹಬ್ಬದ ಅಂಗವಾಗಿ ಅ.18 ರಿಂದ ನ.18 ರವರೆಗೆ ಒಂದು ತಿಂಗಳ ಸೀಮಿತ ಅವಧಿಗೆ ‘ದೀಪಾವಳಿ ಬೊನಾಂಜಾ-2025’ ಸೇವೆ ನೀಡುತ್ತಿದ್ದು, ಗ್ರಾಹಕರು ರಿಯಾಯಿತಿ ದರದಲ್ಲಿ ಸೇವೆ ಪಡೆದುಕೊಳ್ಳುವಂತೆ ತಿಳಿಸಲಾಗಿದೆ.

ವಿಶೇಷ ಕಾರ್ಪೋರೇಟ್ ಕೊಡುಗೆ:

ಎಫ್‌ಆರ್‌ಸಿ1 ಯೋಜನೆಯ ಮೂಲಕ ಗ್ರಾಹಕರು ರೂ.1/- ಗೆ 4ಜಿ ಸೇವೆ ಪಡೆಯಬಹುದು. ಈ ಪ್ಲಾನ್ ನಲ್ಲಿ ಅನಿಯಮಿತ ಧ್ವನಿ ಕರೆ, 2ಜಿಬಿ ಡೇಟಾ/ದಿನದ ನಂತರ ವೇಗವನ್ನು 40 ಕೆಬಿಪಿಎಸ್ ಮತ್ತು 100 ಎಸ್‌ಎಂಎಸ್ (30 ದಿನಗಳಿಗೆ ಮಾತ್ರ). ಈ ಸೌಲಭ್ಯ ವ್ಯಾಪಾರ ಮತ್ತು ಬೃಹತ್ ಗ್ರಾಹಕರಿಗೆ ಅನ್ವಯಿಸುವುದಿಲ್ಲ.

ವಿಶೇಷ ಕಾರ್ಪೋರೇಟ್ ಕೊಡುಗೆ:

ಈ ಪ್ಲಾನ್ ನಲ್ಲಿ ಕನಿಷ್ಠ 10 ಹೊಸ ಪೋಸ್ಟ್ ಪೇಯ್ಡ್ ಬಿಎಸ್‌ಎನ್‌ಎಲ್ ಸಿಮ್ ಮತ್ತು ಒಂದು ಎಫ್‌ಟಿಟಿಹೆಚ್ ಸಂಪರ್ಕ ತೆಗೆದುಕೊಳ್ಳುವ ಕಾರ್ಪೋರೇಟ್ ಗ್ರಾಹಕರು ಎಲ್ಲಾ ಹೊಸ ಪೋಸ್ಟ್ ಪೇಯ್ಡ್ ಸಿಮ್ ಮತ್ತು ಎಫ್‌ಟಿಟಿಹೆಚ್ ಸಂಪರ್ಕಕ್ಕಾಗಿ ಮೊದಲ ತಿಂಗಳ ಎಫ್‌ಎಂಸಿ ಯಲ್ಲಿ ಶೇ.10 ರಷ್ಟು ರಿಯಾಯಿತಿ ಪಡೆಯುತ್ತಾರೆ.

ಶೇ.2.5 ರಿಯಾಯಿತಿ ಪಡೆಯಿರಿ:

ಸ್ನೇಹಿತರಿಗೆ ಅಥವಾ ಕುಟುಂಬದ ಸದಸ್ಯರ ಬಿಎಸ್‌ಎನ್‌ಎಲ್ ಸ್ವಯಂ ಆರೈಕೆ ಅಪ್ಲಿಕೇಶನ್ ಮೂಲಕ ರೂ.199 ಅಥವಾ ಅದಕ್ಕಿಂತ ಹೆಚ್ಚು ರಿಚಾರ್ಜ್ ಮಾಡುವ ಮೂಲಕ ಶೇ.2.5 ತ್ವರಿತ ರಿಯಾಯಿತಿ ಪಡೆಯಬಹುದು. ಮೊದಲ ರಿಚಾರ್ಜ್ಗಳಿಗೆ ಈ ಕೊಡುಗೆ ಅನ್ವಯಿಸುವುದಿಲ್ಲ.

ರೂ.485 ಮತ್ತು ರೂ.1999 ರಿಚಾರ್ಜ್ಗಳಿಗೆ ರಿಯಾಯಿತಿ ಕೊಡುಗೆ:

ಬಿಎಸ್‌ಎನ್‌ಎಲ್ ಸೆಲ್ಫ್ ಕೇರ್ ಅಪ್ಲಿಕೇಷನ್ ಅಥವಾ ವೆಬ್ ಸೈಟ್ ಮೂಲಕ ಮಾಡಲಾದ ಎಸ್‌ಟಿವಿ ರೂ.485 ಮತ್ತು ಪಿವಿ ರೂ.1999 ರ ರಿಚಾರ್ಜ್ ಗಳಿಗೆ, ಎಂಆರ್‌ಪಿ ಮೇಲೆ ಶೇ.05 ರಷ್ಟು ರಿಯಾಯಿತಿ ಲಭಿಸಲಿದೆ.

ಹಿರಿಯ ನಾಗರಿಕರಿಗಾಗಿ ಹೊಸ ಪಿವಿ ರೂ.1812 ವಾರ್ಷಿಕ ಯೋಜನೆ ಬಿಡುಗಡೆ:

ಎಫ್‌ಆರ್‌ಸಿ ಪ್ರಕಾರ ಹಿರಿಯ ನಾಗರಿಕರಿಗಾಗಿ ರೂ.1812 ಗಳ ವಾರ್ಷಿಕ ಯೋಜನೆ ಬಿಡುಗಡೆ ಮಾಡಲಾಗಿದೆ. ಈ ಪ್ಲಾನ್ ನಲ್ಲಿ ಅನಿಯಮಿತ ಕರೆಗಳು, ಪ್ರತಿದಿನ 2ಜಿಬಿ ಡೇಟಾ (ನಂತರ ವೇಗವನ್ನು 40 ಕೆಬಿಪಿಎಸ್ ಗೆ ಇಳಿಸಿದ ಯು/ಎಲ್ ಡೇಟಾ), ಪ್ರತಿದಿನ ಉಚಿತ 100 ಎಸ್‌ಎಂಎಸ್ ಹಾಗೂ 6 ತಿಂಗಳ ವರೆಗೆ ಬಿಐಟಿವಿ ಪ್ರೀಮಿಯಂ ರಾಷ್ಟ್ರೀಯ ಪ್ಯಾಕ್, ಉಚಿತ ಸಿಮ್ ದೊರೆಯಲಿದೆ.

ಇ-ಸಿಮ್ ಸೌಲಭ್ಯ:

ಬಿಎಸ್‌ಎನ್‌ಎಲ್ ಇ-ಸಿಮ್ ಸೌಲಭ್ಯ ಪರಿಚಯಿಸಿದ್ದು, ಈ ಸೌಲಭ್ಯ ಪಡೆಯಲು ಹೊಂದಾಣಿಕೆಯ ಮೊಬೈಲ್ ಹ್ಯಾಂಡ್ ಸೆಟ್ ಅಗತ್ಯ.

ಎಲ್ಲಾ ಗ್ರಾಹಕರು https://selfcare.bsnl.co.in ಆನ್‌ಲೈನ್ ನಲ್ಲಿ ಬಿಲ್ ಪಾವತಿಸುವ ಮೂಲಕ ಸೌಲಭ್ಯ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ www.bsnl.co.in ಗೆ ಭೇಟಿ ನೀಡಬಹುದು ಎಂದು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಬಳ್ಳಾರಿಯ ಉಪಪ್ರಧಾನ ವ್ಯವಸ್ಥಾಪಕರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read