ಚಿಕ್ಕಬಳ್ಳಾಪುರ: ಬೈಕ್, ಶಾಲಾ ವಾಹನ ಡಿಕ್ಕಿಯಾಗಿ ಇಬ್ಬರು ಮಕ್ಕಳು ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ. ಚಿಕ್ಕಬಳ್ಳಾಪುರ ಚಿಂತಾಮಣಿ ತಾಲೂಕು ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬುರುಡುಗುಂಟೆ ಬಳಿ ಅಪಘಾತ ನಡೆದಿದೆ.
ಒಂದೇ ಬೈಕ್ ನಲ್ಲಿ ತೆರಳುತ್ತಿದ್ದ ಇಬ್ಬರು ಮಕ್ಕಳು ಮತ್ತು ಇಬ್ಬರು ಪುರುಷರು ಸಾವನ್ನಪ್ಪಿದ್ದಾರೆ. ಅದೇ ಬೈಕ್ ನಲ್ಲಿ ತೆರಳುತ್ತಿದ್ದ ಮತ್ತೊಂದು ಮಗು ಅಪಾಯದಿಂದ ಪಾರಾಗಿದೆ.
ಬಾಲಾಜಿ, ವೆಂಕಟೇಶಪ್ಪ, ಹರೀಶ್, ಆರ್ಯ ಮೃತಪಟ್ಟವರು ಎಂದು ಹೇಳಲಾಗಿದೆ. ಅದೃಷ್ಟವಶಾತ್ ಬೈಕ್ ನಲ್ಲಿದ್ದ ಮತ್ತೊಂದು ಮಗು ಶಿವಾನಿ ಪಾರಾಗಿದೆ. ಮದುವೆಯಲ್ಲಿ ಭಾಗವಹಿಸಲು ತಲಕಾಯಲಬೆಟ್ಟಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದರು. ಬೈಕ್ ಗೆ ಖಾಸಗಿ ಶಾಲೆಗೆ ಸೇರಿದ ಮಿನಿ ಬಸ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಒಂದೇ ಬೈಕ್ ನಲ್ಲಿ ಇಬ್ಬರು ಪುರುಷರು, ಮೂವರು ಮಕ್ಕಳು ತೆರಳುತ್ತಿದ್ದ ವೇಳೆ ಶಾಲಾ ಬಸ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.