2025-26 ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಆರ್ಥಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತ ಸಮುದಾಯದವರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್, ಪಾರ್ಸಿ ಸಮುದಾಯದ ವಧು-ವರರು ಸಾಮೂಹಿಕ ವಿವಾಹದಲ್ಲಿ ಆಗುವ ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡಲು ಪ್ರೋತ್ಸಾಹಧನ ಹಾಗೂ ಸಾಮೂಹಿಕ ವಿವಾಹಗಳನ್ನು ಆಯೋಜಿಸುವ ಸ್ವಯಂ ಸೇವಾ ಸಂಸ್ಥೆಗಳಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಆಯೋಜಿಸುವ ಸಾಮೂಹಿಕ ವಿವಾಹಗಳಲ್ಲಿ ಮದುವೆ ಆಗುವ ವಧು-ವರರಿಗೆ ವಿವಾಹ ವೆಚ್ಚಗಳಿಗಾಗಿ ಪ್ರತಿ ಜೊಡಿಗೆ ರೂ.50 ಸಾವಿರ (ಐವತ್ತು ಸಾವಿರ ರೂಪಾಯಿಗಳು ಮಾತ್ರ) ಪ್ರೋತ್ಸಾಹಧನ ನೀಡಲಾಗುವುದು ಮತ್ತು ಸಾಮೂಹಿಕ ವಿವಾಹಗಳನ್ನು ಆಯೋಜಿಸುವ ಸ್ವಯಂ ಸೇವಾ ಸಂಸ್ಥೆಗಳಿಗೆ ಪ್ರತಿ ಜೊಡಿಗೆ ರೂ. 5 ಸಾವಿರಗಳ ಸಹಾಯಧನ ನೀಡಲಾಗುತ್ತದೆ.
ಸ್ವಯಂ ಸೇವಾ ಸಂಸ್ಥೆಗಳು https://mmdrsattendance. dom.karnataka.karnataka.gov.in/Home/Register ವೆಬ್‍ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಚೇರಿಯ ದೂರವಾಣಿ ಸಂಖ್ಯೆ:0836-2971590 ಅಥವಾ ಧಾರವಾಡ ಮಾಹಿತಿ ಕೇಂದ್ರ:9738287549, ಹುಬ್ಬಳ್ಳಿ ಮಾಹಿತಿ ಕೇಂದ್ರ: 8867718261, ಕಲಘಟಗಿ ಮಾಹಿತಿ ಕೇಂದ್ರ:8951674107, ಕುಂದಗೋಳ ಮಾಹಿತಿ ಕೇಂದ್ರ:8904661872, ನವಲಗುಂದ ಮಾಹಿತಿ ಕೇಂದ್ರ: 8746894524 ಗಳಿಗೆ ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.