ಹಾಸನ: ಹಾಸನಾಬ ದೇವಿ ದೇವಾಲಯದ ಗರ್ಭಗುಡಿ ಬಾಗಿಲನ್ನು ಇಂದು ಮುಚ್ಚಲಾಗುವುದು. ಮಧ್ಯಾಹ್ನ 12 ಗಂಟೆಯ ನಂತರ ವಿಶ್ವರೂಪ ದರ್ಶನದ ನಂತರ ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲು ಹಾಕಲಾಗುವುದು..
ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಶಾಸಕ ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಎಸ್ಪಿ ಮೊಹಮ್ಮದ್ ಸುಜಿತಾ ಮತ್ತು ಉಪ ವಿಭಾಗಾಧಿಕಾರಿ ಮಾರುತಿ ಸಮ್ಮುಖದಲ್ಲಿ ಬಾಗಿಲು ಮುಚ್ಚಲಾಗುವುದು.
ಅಕ್ಟೋಬರ್ 9ರಂದು ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ತೆರೆಯಲಾಗಿತ್ತು. ಇದುವರೆಗೆ 26 ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನ ಪಡೆದುಕೊಂಡಿದ್ದಾರೆ. ಲಾಡು ಪ್ರಸಾದ, ಟಿಕೆಟ್ ಮಾರಾಟದಿಂದ 22 ಕೋಟಿ ರೂ.ಗೂ ಹೆಚ್ಚು ಆದಾಯ ಬಂದಿದೆ. ಈ ಬಾರಿ ಇತಿಹಾಸ ಬರೆದ ಹಾಸನಾಂಬ ದೇವಿ ಜಾತ್ರಾ ಮಹೋತ್ಸವಕ್ಕೆ ಮಧ್ಯಾಹ್ನ ತೆರೆ ಬೀಳಲಿದೆ.
ಸಾರ್ವಜನಿಕ ದರ್ಶನ ಮುಕ್ತಾಯವಾಗಿದ್ದು, ಕಡೆಗಳಿಗೆಯಲ್ಲಿಯೂ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆಯುತ್ತಿದ್ದಾರೆ. ಮುಖ್ಯದ್ವಾರದಿಂದಲೇ ಆಗಮಿಸಿ ಭಕ್ತರು ದರ್ಶನ ಪಡೆದುಕೊಳ್ಳುತ್ತಿದ್ದಾರೆ. ಈಗಾಗಲೇ ದೇವಾಲಯದ ಎಲ್ಲಾ ಸರತಿ ಸಾಲುಗಳನ್ನು ಬಂದ್ ಮಾಡಲಾಗಿದೆ. ವಿಸರ್ಜನಾ ಪೂಜೆಗಾಗಿ ಸಾರ್ವಜನಿಕ ದರ್ಶನ ಅಂತ್ಯವಾಗಗಲಿದ್ದು, ನಂತರ ದೇವಾಲಯದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಹಾಸನಾಂಬೆ ಆವರಣದಲ್ಲಿ ಭಕ್ತ ಸಾಗರವೇ ನೆರೆದಿದೆ. ಮಧ್ಯಾಹ್ನ ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲು ಹಾಕಲಾಗುವುದು.
