ಬಾಗಲಕೋಟೆ : ಪತಿ ಕಿರುಕುಳ ತಾಳಲಾರದೇ ಮಗನ ಜೊತೆ ಬಾವಿಗೆ ಹಾರಿ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟೆ ಜಿಲ್ಲೆಯ ಕೆರೂರು ಪಟ್ಟಣದಲ್ಲಿ ನಡೆದಿದೆ.
3 ವರ್ಷದ ಜೊತೆ ಮಗನ ಜೊತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರನ್ನು ಮತ್ತಿಕಟ್ಟಿಯ ಪುತ್ರ ಅಬ್ದುಲ್ ರಹಿಮಾನ್ (3) ತಾಯಿ ಫಾತಿಮಾ ವಾಲೀಕಾರ್ (21) ಎಂದು ಗುರುತಿಸಲಾಗಿದೆ.
ಪತಿ ಮಸ್ತಾನ್ ಸಾಬ್ ಕಿರುಕುಳಕ್ಕೆ ಬೇಸತ್ತು ಅವರು ಸೂಸೈಡ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮಸ್ತಾಬ್ ಸಾಬ್ ವಿರುದ್ಧ ಪೋಷಕರು ಆರೋಪ ಮಾಡಿದ್ದಾರೆ. ಕಳೆದ 8 ವರ್ಷದ ಹಿಂದೆ ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಇತ್ತೀಚೆಗೆ ಪತಿ ಕಿರುಕುಳ ತಾಳಲಾರದೇ ಮಗನನ್ನು ಕರೆದುಕೊಂಡು ಫಾತಿಮಾ ವಾಲೀಕಾರ್ ಮನೆಗೆ ಬಂದಿದ್ದರು. ಪೋಷಕರು ಕೆರೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
You Might Also Like
TAGGED:ಬಾಗಕೋಟೆ