ಬೆಂಗಳೂರು : ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಉಗ್ರಪ್ಪ ಸಮಿತಿಯ ವರದಿ ಜಾರಿಗೆ ಮುಂದಾಗಿರುವ ಸರ್ಕಾರದ ನಿಲುವಿಗೆ ವಿವಿಧ ಮಹಿಳಾ ಸಂಘಟನೆಗಳ ಸದಸ್ಯ ಧನ್ಯವಾದ ತಿಳಿಸಿದರು.
ವಿವಿಧ ಮಹಿಳಾ ಸಂಘಟನೆಗಳ ಸದಸ್ಯರು, ಲೇಖಕಿಯರು ಹಾಗೂ ಮಹಿಳಾ ಹೋರಾಟಗಾರ್ತಿಯರ ನಿಯೋಗದವರು ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ಉಗ್ರಪ್ಪ ಸಮಿತಿಯ ವರದಿ ಜಾರಿಗೆ ಮುಂದಾಗಿರುವ ಸರ್ಕಾರದ ನಿಲುವಿಗೆ ಧನ್ಯವಾದ ತಿಳಿಸಿದರು.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ವಿವಿಧ ಮಹಿಳಾ ಸಂಘಟನೆಗಳ ಸದಸ್ಯರು, ಲೇಖಕಿಯರು ಹಾಗೂ ಮಹಿಳಾ ಹೋರಾಟಗಾರ್ತಿಯರ ನಿಯೋಗದವರು ಮಂಗಳವಾರ ನನ್ನನ್ನು ಭೇಟಿಯಾಗಿ, ಧರ್ಮಸ್ಥಳ ಪ್ರಕರಣದ ತನಿಖೆಯಲ್ಲಿ ಎಸ್‌ಐಟಿ ಯ ಸ್ವಾತಂತ್ರ್ಯ ರಕ್ಷಣೆ, ಹಿಂದಿನ ಪ್ರಕರಣಗಳು ಹಾಗೂ ಸಾಕ್ಷಿಗಳ ಸಾವಿನ ಪ್ರಕರಣಗಳ ಮರುತನಿಖೆ, ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವುದು ಹಾಗೂ ಮಹಿಳೆಯರ ಸುರಕ್ಷತೆಗಾಗಿ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳುವುದು ಇನ್ನು ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿ, ಮನವಿ ಸಲ್ಲಿಸಿ, ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಉಗ್ರಪ್ಪ ಸಮಿತಿಯ ವರದಿ ಜಾರಿಗೆ ಮುಂದಾಗಿರುವ ನಮ್ಮ ಸರ್ಕಾರದ ನಿಲುವಿಗೆ ಧನ್ಯವಾದ ಸಲ್ಲಿಸಿದರು ಎಂದಿದ್ದಾರೆ.
ವಿವಿಧ ಮಹಿಳಾ ಸಂಘಟನೆಗಳ ಸದಸ್ಯರು, ಲೇಖಕಿಯರು ಹಾಗೂ ಮಹಿಳಾ ಹೋರಾಟಗಾರ್ತಿಯರ ನಿಯೋಗದವರು ಮಂಗಳವಾರ ನನ್ನನ್ನು ಭೇಟಿಯಾಗಿ, ಧರ್ಮಸ್ಥಳ ಪ್ರಕರಣದ ತನಿಖೆಯಲ್ಲಿ ಎಸ್‌ಐಟಿ ಯ ಸ್ವಾತಂತ್ರ್ಯ ರಕ್ಷಣೆ, ಹಿಂದಿನ ಪ್ರಕರಣಗಳು ಹಾಗೂ ಸಾಕ್ಷಿಗಳ ಸಾವಿನ ಪ್ರಕರಣಗಳ ಮರುತನಿಖೆ, ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವುದು ಹಾಗೂ ಮಹಿಳೆಯರ… pic.twitter.com/dDdmgPxAoV
— Siddaramaiah (@siddaramaiah) October 22, 2025