ಬೆಂಗಳೂರು: ಚಿಕಿತ್ಸೆ ನೀಡುವ ನೆಪದಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಚರ್ಚ ರೋಗ ತಜ್ಞ ನನ್ನು ಬೆಂಅಗ್ಳೂರಿನ ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಡಾ.ಪ್ರವೀಣ್ ಬಂಧಿತ ಚರ್ಮ ರೋಗ ತಜ್ಞ. ಬೆಂಗಳೂರಿನ ಆಸ್ಟಿನ್ ಟೌನ್ ನಿವಾಸಿ. ಚಿಕಿತ್ಸೆ ಬಂದ ಯುವತಿಗೆ ವೈದ್ಯ ಲೈಂಗಿಕ ಕಿರುಕುಳ ನೀಡಿದ್ದ. ಯುವತಿ ವೈದ್ಯನ ಬಳಿ ಮೂರು ದಿನಗಳ ಹಿಂದೆ ಚಿಕಿತ್ಸೆಗಾಗಿ ಬಂದಿದ್ದಳು. ಈ ವೇಳೆ ವೈದ್ಯ ಯುವತಿಗೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದ. ನೊಂದ ಯುವತಿ ಈ ವಿಚಾರವನ್ನು ಪೋಷಕರಿಗೆ ತಿಳಿಸಿದ್ದಳು.
ಪೋಷಕರು ವೈದ್ಯನ ಕ್ಲಿನಿಕ್ ಬಳಿ ಬಂದು ಗಲಾಟೆ ಮಾಡಿದ್ದರು. ಅಲ್ಲದೇ ಅಶೋಕನಗರ ಠಾಣೆಯಲ್ಲಿ ವೈದ್ಯನ ವಿರುದ್ಧ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ವೈದ್ಯನನ್ನು ಬಂಧಿಸಿದ್ದಾರೆ.