ಬೆಂಗಳೂರು: ಎಲ್ಲೆಡೆ ಬೆಳಕಿನ ಹಬ್ಬ ದೀಪಾವಳಿ ಸಡಗರ-ಸಂಭ್ರಮ ಮನೆ ಮಾಡಿದೆ. ಹಬ್ಬದ ಸಂಭ್ರಮದಲ್ಲಿ ಪಟಾಕಿ ಹೊಡೆಯಲು ಹೋಗಿ ಗಾಯಗೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದೀಪಾವಳಿ ಪಟಾಕಿ ಅವಘಡದಲ್ಲಿ 90ಹೆಚ್ಚು ಜನರು ಗಾಯಗೊಂಡಿದ್ದಾರೆ. ಪಟಾಕಿ ಸಿಡಿಸುವವರಿಗಿಂತ ನೋಡುತ್ತಾ ನಿಂತವರು ಹಾಗೂ ದಾರಿ ಹೋಕರೇ ಹೆಚ್ಚಿನ ಸಂಖ್ಯೆಯಲ್ಲಿ ಗಾಯಗೊಂಡಿದ್ದಾರೆ. ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾರಾಯಣ ನೇತ್ರಾಲಯದಲ್ಲಿ 51ರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರಲಿ 27ಮಕ್ಕಳಿದ್ದಾರೆ. ಆರು ಜನರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ 13ಜನರು ಚಿಕಿತ್ಸೆಗೆ ದಾಖಲಾಗಿದ್ದಾರೆ. ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ 13 ಪ್ರಭಾ ಕಣ್ನಿನ ಆಸ್ಪತ್ರೆಯಲ್ಲಿ 6 ಜನರು ದಾಖಲಾಗಿದ್ದಾರೆ. ಅಗರ್ವಾಲ್ ಕಣ್ಣಿನ ಆಸ್ಪತ್ರೆಯಲ್ಲಿ ಮೂವರು ದಾಖಲಾಗಿದ್ದಾರೆ.
ಪಟಾಕಿ ಸಿಡಿದು ಗಣ್ಣಿಗೆ ಗಾಯಗೊಂಡವರಲ್ಲಿ ಹಲವರು ದೃಷ್ಟಿ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. 20ವರ್ಷದ ಯುವಕನೊಬ್ಬ ಪಟಾಕಿ ಅವಘಡದಲ್ಲಿ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾನೆ. ಬೆಂಗಳ್ಯ್ರಿನ ಅಕ್ಕಿಪೇಟೆ ನಿವಾಸಿಯಾಗಿರುವ ಯುವಕನ ಕಣ್ಣಿನ ದೃಷ್ಟಿ ಶಾಶ್ವತವಾಗಿ ಹೋಗಿದೆ ಎಂದು ತಿಳಿದುಬಂದಿದೆ.
ಪಟಾಕಿ ಸಿಡಿಸುವಾಗ, ಪಟಾಕಿ ಸಿಡಿಸುವುದನ್ನು ನೋಡುವಾಗ ಜಾಗೃತೆ ಇರಲಿ. ಬೆಳಕಿನ ಹಬ್ಬದಲ್ಲಿ ಪಟಾಕಿ ಸಂಭ್ರಮದಿಂದ ಕಣ್ಣಿಗೆ ಗಾಯಗಳಾದರೆ ಬದುಕನ್ನೇ ಕತ್ತಲಲ್ಲಿ ಕಳೆಯಬೇಕಾದೀತು ಎಚ್ಚರ!