ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಸಂಸ್ಕೃತ ಶಾಲೆಯಲ್ಲಿ ಕ್ರೌರ್ಯ ಮೆರೆದಿದ್ದ ಮುಖ್ಯ ಶಿಕ್ಷಕ ವೀರೇಶ ಹಿರೇಮಠನನ್ನು ಅಮಾನತುಗೊಳಿಸಲಾಗಿದೆ.
ಚಿತ್ರದುರ್ಗ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಶಿಕ್ಷಕನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ನಾಯಕನಹಟ್ಟಿ ಸಂಸ್ಕೃತ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಮೇಲೆ ವೀರೇಶ ಹಿರೇಮಠ ಹಲ್ಲೆ ನಡೆಸಿದ್ದ. ಕಾಲಿನಿಂದ ಒದ್ದು ಕ್ರೌರ್ಯ ಮೆರೆದಿದ್ದ.
ವಿಡಿಯೋ ಬಹಿರಂಗವಾದ ಬಳಿಕ ವೀರೇಶನನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಚಳ್ಳಕೆರೆಯಲ್ಲಿ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದ್ದು, ಎರಡು ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಎರಡು ದಿನದ ನಂತರ ಓಪನ್ ಕೋರ್ಟ್ ಗೆ ಶಿಕ್ಷಕ ವೀರೇಶ್ ನನ್ನು ಹಾಜರುಪಡಿಸಲಾಗುವುದು.