ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬ ದೇವಿಯ ಸಾರ್ವಜನಿಕರ ದರ್ಶನಕ್ಕೆ ಅಕ್ಟೋಬರ್ 22 ಕೊನೆಯ ದಿನವಾಗಿದೆ. ಅಕ್ಟೋಬರ್ 23 ರಂದು ಮಧ್ಯಾಹ್ನ ದೇವಾಲಯದ ಗರ್ಭಗುಡಿ ಬಾಗಿಲು ಮುಚ್ಚಲಾಗುವುದು.
ಕಳೆದ 13 ದಿನದಲ್ಲಿ ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆದುಕೊಂಡಿದ್ದು, ಹುಂಡಿ ಕಾಣಿಕೆ ಹೊರತುಪಡಿಸಿ ಸುಮಾರು 20 ಕೋಟಿ ರೂಪಾಯಿಯಷ್ಟು ಆದಾಯ ಸಂಗ್ರಹವಾಗಿದೆ.
1000 ರೂ., 300 ರೂ. ವಿಶೇಷ ದರ್ಶನ ಟಿಕೆಟ್ ಮಾರಾಟ ಮತ್ತು ಲಾಡು ಪ್ರಸಾದದಿಂದ ಸುಮಾರು 20 ಕೋಟಿಯಷ್ಟು ಆದಾಯ ಬಂದಿದೆ. ಅಕ್ಟೋಬರ್ 9 ರಿಂದ 23ರ ವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅಕ್ಟೋಬರ್ 22 ಸಾರ್ವಜನಿಕರ ದರ್ಶನಕ್ಕೆ ಕೊನೆಯ ದಿನವಾಗಿದೆ. ಅಕ್ಟೋಬರ್ 23ರ ಮಧ್ಯಾಹ್ನ ದೇವಾಲಯದ ಗರ್ಭಗುಡಿ ಬಾಗಿಲು ಮುಚ್ಚಲಾಗುವುದು. ಭಕ್ತರಿಗೆ ಅವಕಾಶ ಇರುವುದಿಲ್ಲ. ಬುಧವಾರವೇ ದರ್ಶನ ಮುಕ್ತಾಯವಾಗುವುದರಿಂದ ಲಕ್ಷಾಂತರ ಜನ ಆಗಮಿಸುವ ಸಾಧ್ಯತೆ ಇದೆ.