ಬೆಂಗಳೂರು: ಬೆಂಗಳೂರಿನಲ್ಲಿ ಸುಮಾರು 500 ಕಿ.ಮೀ ರಸ್ತೆಯನ್ನು 4 ಸಾವಿರ ಕೋಟಿ ವೆಚ್ಚದಲ್ಲಿ ವೈಟ್ ಟಾಪಿಂಗ್ ಮಾಡಲು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗಿದ್ದು, ಮುಂದಿನ ವಾರ ಅಂತಿಮಗೊಳ್ಳಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಗಾಂಧಿನಗರ ಕ್ಷೇತ್ರದಲ್ಲಿ ವೈಟ್ ಟಾಪಿಂಗ್ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಬೆಂಗಳೂ ಅಭಿವೃದ್ಧಿಗೆ ಪ್ರಧಾನಿ ಮೋದಿಯವರು ನಯಾ ಪೈಸೆ ಬಿಡುಗಡೆ ಮಾಡಿಲ್ಲ. ಸಂಸದರು ಬೆಂಗಳೂರು ಪ್ರಗತಿ, ತೆರಿಗೆ ಹಂಚಿಕೆ ಅನ್ಯಾಯದ ಬಗ್ಗೆ ಕೇಂದ್ರದ ಬಳಿ ಕೇಳುತ್ತಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.
ಬೆಂಗಳೂರಿನ ಟನಲ್ ರಸ್ತೆಗೆ ವಿರೋಧ ಮಾಡಿದ್ದಾರೆ ಸಂಸದರು. ಅವರ ಹೆಸರು ಈಗ ಹೇಳಲು ಹೋಗಲ್ಲ, ಬರೀ ಖಾಲಿ ಡಬ್ಬ, ಟ್ಈಟ್ ಮಾಡುವುದಷ್ಟೇ ಆಯ್ತು. ಬೇರೇನೂ ಇಲ್ಲ. ಬೆಂಗಳೂರಿನ ಸಂಸದರು ಕೇಂದ್ರದ ಬಳಿ ರಾಜ್ಯಕ್ಕಾಗಿ ನಯಾ ಪೈಸೆ ಕೊಡಿಸುತ್ತಿಲ್ಲ. ಅವರ್ಯಾರಿಗೂ ಬೆಂಗಳೂರಿನ ಅಭಿವೃದ್ಧಿ ಬೇಕಿಲ್ಲ ಎಂದು ವಾಗ್ದಾಳಿ ನಡೆಸಿದರು.