ಚಿಕ್ಕಮಗಳೂರು : ರಾಜ್ಯದಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, 8 ಸಾಕು ನಾಯಿಗಳಿಗೆ ಕಿಡಿಗೇಡಿಗಳು ವಿಷ ಹಾಕಿ ಕೊಂದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರದ ಅಬ್ಬಿಗುಂಡಿ ಬಳಿ ನಡೆದಿದೆ.
ಸತ್ಯನಾರಾಯಣ ಎಂಬುವವರ ಮನೆಯಲ್ಲಿ ಸಾಕಿದ್ದ 8 ನಾಯಿಗಳಿಗೆ ವಿಷ ಹಾಕಿ ಕೊಲ್ಲಲಾಗಿದೆ.
ಸತ್ತ ಕೋಳಿಗಳಿಗೆ ಕ್ರಿಮಿನಾಶಕ ಹಾಕಿ ಇಡಲಾಗಿತ್ತು. ಅದನ್ನು ತಿಂದು 8 ನಾಯಿಗಳು ಮೃತಪಟ್ಟಿದೆ.
ಘಟನೆಗೆ ಗ್ರಾಮಸ್ಥರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಆಗ್ರಹಿಸಿದ್ದಾರೆ.ಸಾಕು ನಾಯಿ ಸಾವಿಗೆ ಮಾಲೀಕರು ಕಂಬನಿ ಮಿಡಿದಿದ್ದಾರೆ. ಮನೆ ಮಾಲೀಕರ ಮೇಲಿನ ದ್ವೇಷಕ್ಕೆ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.