ಕಾರವಾರ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ದಂಪತಿ ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಕಾಸರಕೋಡದಲ್ಲಿ ಘಟನೆ ನಡೆದಿದೆ. ಸಂತೋಷ್ ಗಣಪಗೌಡ(50), ಸೀತಾ 42 ಮೃತಪಟ್ಟ ದಂಪತಿ. ಕೃಷಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಮನೆಯ ಅಂಗಳದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಮೃತಪಟ್ಟಿದ್ದಾರೆ.
ಸಂತೋಷ್ ಅವರಿಗೆ ಮೊದಲು ವಿದ್ಯುತ್ ಪ್ರವಹಿಸಿದ್ದು, ತಡೆಯಲು ಹೋದ ಪತ್ನಿ ಸೀತಾ ಅವರಿಗೂ ವಿದ್ಯುತ್ ಪ್ರವಹಿಸಿದೆ. ಈ ವೇಳೆ ರಕ್ಷಿಸಲು ಬಂದ ಇಬ್ಬರೂ ಪುತ್ರರಿಗೂ ವಿದ್ಯುತ್ ತಗುಲಿದೆ. ಸಂತೋಷ್ ಮತ್ತು ಸೀತಾ ಮೃತಪಟ್ಟಿದ್ದಾರೆ. ಇಬ್ಬರು ಪುತ್ರರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.