ವಿಜಯಪುರ: ಆರ್.ಎಸ್.ಎಸ್. ಪಥ ಸಂಚಲನದಲ್ಲಿ ಇಬ್ಬರು ಸರ್ಕಾರಿ ನೌಕರರು ಭಾಗವಹಿಸಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ಸರ್ಕಾರದ ಆದೇಶವನ್ನು ಕೂಡ ಲೆಕ್ಕಿಸದೆ ಪಥ ಸಂಚಲನದಲ್ಲಿ ನೌಕರರು ಭಾಗಿಯಾದ ಘಟನೆ ವಿಜಯಪುರ ಜಿಲ್ಲೆ ತಾಳಿಕೋಟೆಯಲ್ಲಿ ನಡೆದಿದೆ.. ಹುಣಸಗಿ ಶಾಲೆಯ ಗಣಿತ ಶಿಕ್ಷಕ ಗುರುರಾಜ್ ಮತ್ತು ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಬರದೇವನಾಳ ಗ್ರಾಮದ ಬಿಲ್ ಕಲೆಕ್ಟರ್ ಸಿದ್ದರಾಮಯ್ಯ ನಂದಿಕೋಲಮಠ ಅವರು ಪಥ ಸಂಚಲನದಲ್ಲಿ ಭಾಗವಹಿಸಿದ್ದಾರೆ. ಗಣವೇಶ ಧರಿಸಿರುವ ನೌಕರರ ಫೋಟೋಗಳು ವೈರಲ್ ಆಗಿವೆ.