ಬೆಂಗಳೂರು: ಬಿಹಾರ ಚುನಾವಣೆ ಹೆಸರಲ್ಲಿ ರಾಜ್ಯದಲ್ಲಿ ಸಚಿವರು ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಸಂಸದ ಬಿ.ವೈ.ರಾಘವೇಂದ್ರ ಆರೋಪಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಅವರ ಬಳಿ ದಾಖಲೆಗಳಿದ್ದರೆ ಮೊದಲು ಬಿಡುಗಡೆ ಮಾಡಲಿ. ಬಳಿಕ ಆರೋಪ ಮಾಡಲಿ ಎಂದಿದ್ದಾರೆ.
ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಹಿಟ್ ಆಂಡ್ ರನ್ ನಾಯಕರ ಪಟ್ಟಿಗೆ ಸೇರುವುದು ಬೇಡ. ಹಿಟ್ ಆಂಡ್ ರನ್ ಮಾಡುವ ಒಂದಿಷ್ಟು ನಾಯಕರಿದ್ದಾರಲ್ಲಾ ಅವರಂತೆ ಸಂಸದ ರಾಘವೇಂದ್ರ ಆಗುವುದು ಬೇಡ. ಸುಳ್ಳಿಗೆ ಮತ್ತೊಂದು ಉದಾಹರಣೆಯಂತಾಗುವುದೂ ಬೇಡ ಎಂದು ಟಾಂಗ್ ನೀಡಿದರು.