ಚಿಕ್ಕಮಗಳೂರು: ಪತಿಯನ್ನು ಕೊಲೆಗೈದು ಕೊಳವೆ ಬಾವಿಗೆ ಶವ ಎಸೆದಿದ್ದ ಪತಿ ಮಹಾಶಯನನ್ನು ಚಿಕ್ಕಮಗಳುರು ಪೊಲೀಸರು ಬಂಧಿಸಿದ್ದಾರೆ.
ವಿಜಯ್ ಬಂಧಿತ ಆರೋಪಿ. ಒಂದುವರೆ ತಿಂಗಳ ಹಿಂದೆ ವಿಜಯ್ ತನ್ನ ಪತ್ನಿ ಭಾರತಿ (28)ಯನ್ನು ಕೊಲೆಗೈದು ಶವವನ್ನು ಯಾರಿಗೂ ತಿಳಿಯದಂತೆ ತೋಟದಲ್ಲಿದ್ದ ಕೊಳವೆ ಬಾವಿಗೆ ಹಾಕಿ, ಗೋಣಿಚೀಲ, ಮರಳು ಹಾಕಿ ಮುಚ್ಚಿಟ್ಟಿದ್ದ. ಅನುಮಾನ ಬರಬಾರದು ಎಂದು ತಾನೇ ಪೊಲೀಸ್ ಠಾಣೆಗೆ ಹೋಗಿ ತನ್ನ ಪತ್ನಿ ಮಾನಸ್ಕ ಅಸ್ವಸ್ಥೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾಳೆ. ಹುಡುಕಿಕೊಡಿ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಪತಿಯ ಬಗ್ಗೆಯೇ ಅನುಮಾನ ವ್ಯಕ್ತವಾಗಿದೆ. ಅಲ್ಲದೇ ಮೃತ ಭಾರತಿಯ ಅತ್ತೆ-ಮಾವ ಹಾಗೂ ಆಕೆಯ ಪತಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪತಿ ತಾನೇ ಕೊಲೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ.
ಅಲ್ಲದೇ ತನಿಖೆ ವೇಳೆ ಆರೋಪಿ ಪತಿ, ತನ್ನ ಪತ್ನಿ ದೆವ್ವವಾಗಿ ಕಾಡಬಾರದೆಂದು, ಪೊಲೀಸರು ಕೇಸ್ ಪತ್ತೆ ಹಚ್ಚುವಲ್ಲಿ ವಿಫಲರಾಗಬೇಕು ಎಂದು ದೇವರಿಗೆ ಮೂರು ಪ್ರಾಣಿ ಬಲಿ ಕೊಟ್ಟು, ಕಬ್ಬಿಣದ ತಗಡಿನಲ್ಲಿ ಬರೆದು ಹೆಂಡತಿ ಫೋಟೋ ಇಟ್ಟು ದೇವಾಲಯದ ಮರಕ್ಕೆ ಮೊಳೆ ಹೊಡೆದಿರುವುದು ಬೆಳಕಿಗೆ ಬಂದಿದೆ. ಸದ್ಯ ತಹಶಿಲ್ದಾರ್ ಹಾಗೂ ಡಿವೈಎಸ್ ಪಿ ಸಮ್ಮುಖದಲ್ಲಿ ಕೊಳವೆಬಾಯಿಯಿಂದ ಮೃತದೇಹ ಹೊರತೆಗೆಯಲಾಗಿದೆ.