ಬೆಂಗಳೂರು : ಬೆಂಗಳೂರಿಗರೇ ಹುಷಾರ್..ಇನ್ಮುಂದೆ ರಸ್ತೆ ಬದಿ ಕಸ ಹಾಕಿದ್ರೆ ನಿಮ್ಮ ಮನೆಗೆ ಬಂದು ದಂಡ ಹಾಕ್ತಾರೆ.!
ಹೌದು, ಜೆಬಿಎ ( ಗ್ರೇಟರ್ ಬೆಂಗಳೂರು ಅಥಾರಿಟಿ) ಅವರು ರಸ್ತೆಬದಿ ಕಸ ಹಾಕುವವರಿಗೆ ಎಚ್ಚರಿಕೆ ನೀಡಿದ್ದು, ದಂಡದ ಬಿಸಿ ಮುಟ್ಟಿಸಿದ್ದಾರೆ. ಅಧಿಕಾರಿಗಳು ಕಸದ ಕವರ್ ಮೂಲಕ ಮನೆಯ ವಿಳಾಸ ಹುಡುಕಿ ಮನೆಗೆ ಬಂದು ದಂಡ ವಿಧಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಕಸ ಹಾಕುವವರಿಗೆ ಇದು ಎಚ್ಚರಿಕೆಯ ಗಂಟೆಯಾಗಿದೆ. ಪ್ರತಿದಿನ 20 ಕ್ಕೂ ಹೆಚ್ಚು ಜನರಿಗೆ ದಂಡ ವಿಧಿಸಲಾಗುತ್ತಿದೆ, ದಂಡ 500 ರಿಂದ 2000 ರೂ ವರೆಗೆ ಎಂದು ಬೆಂಗಳೂರು ಸಾಲಿಡ್ ವೇಸ್ಟ್ ಮ್ಯಾನೇಜ್ ಮೆಂಟ್ ಲಿಮಿಟೆಡ್ ಅಧಿಕಾರಿಗಳು ತಿಳಿಸಿದ್ದಾರೆ.