ಕಾಸರಗೋಡು: ಯುವಕನೊಬ್ಬ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಾಸರಗೋಡಿನ ಕುಂಬಳೆ ಸಮೀಪದ ನಾರಾಯಣಮಂಗಲದಲ್ಲಿ ನಡೆದಿದೆ.
ವಿವೇಕ್ ಶಟ್ಟಿ (28) ಆತ್ಮಹತ್ಯೆಗೆ ಶರಣಾದ ಯುವಕ. ಯಾವುದೋ ಕಾರಣಕ್ಕೆ ಬೇಸರಗೊಂಡಿದ್ದ ವಿವೇಕ್ ಏಕಾಏಕಿ ಬಾವಿಗೆ ಹಾರಿಇದ್ದಾನೆ. ಆತನನ್ನು ರಕ್ಷಿಸಲೆಂದು ಆತನ ಸಹೋದರ ಕೂಡ ಬಾವಿಗೆ ಹಾರಿದ್ದ. ಇಬ್ಬರು ಯುವಕರು ಬಾವಿಗೆ ಹಾರುತ್ತಿದ್ದಂತೆ ಕುಟುಂಬದವರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿ ಅಗ್ನಿಶಾಮಕ ಸಿಬ್ಬಂದಿ ಇಬ್ಬರನ್ನೂ ಮೇಲಕೆತ್ತಿ, ಕುಂಬಳೆ ಆಸ್ಪತ್ರೆಗೆ ದಾಖಲಿಸಿದ್ದರು.
ಆದರೆ ವಿವೇಕ್ ಶೆಟ್ಟಿ ಸಾವನ್ನಪ್ಪಿದ್ದು, ಆತನ ಸಹೋದರ ಬಚಾವ್ ಆಗಿದ್ದಾನೆ. ಮೃತ ವಿವೇಕ್ ಕಾಸರಗೋಡಿನಲ್ಲಿ ಸೀನಿಯರ್ ಕ್ಲರ್ಕ್ ಹುದ್ದೆಯಲ್ಲಿ ಇದ್ದರು. ಈಗ ಇದ್ದಕ್ಕಿದ್ದಂತೆ ಆತ್ಮಹತ್ಯೆಗೆ ಶರಣಾಗಿದ್ದಾರೆ.