BREAKING : ರಾಜ್ಯದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ ಸಿಎಂ ಸಿದ್ದರಾಮಯ್ಯ |Deepavali 2025

ಬೆಂಗಳೂರು : ರಾಜ್ಯಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಈ ಹೊತ್ತಲ್ಲಿ ರಾಜ್ಯದ ಜನತೆಗೆ ಸಿಎಂ ಸಿದ್ದರಾಮಯ್ಯ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ.

ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ ಸಿಎಂ ಸಿದ್ದರಾಮಯ್ಯ ‘ ನಾಡಬಂಧುಗಳಿಗೆ ದೀಪಾವಳಿ ಹಬ್ಬದ ಶುಭಾಶಯಗಳು. ಕತ್ತಲಿನಿಂದ ಬೆಳಕಿನ ಹಾದಿ ತೋರುವ ಈ ಹಬ್ಬವು ಸಮಾಜವನ್ನು ಬಾಧಿಸುತ್ತಿರುವ ದ್ವೇಷ, ಹಿಂಸೆ, ಅಸತ್ಯ, ಅಶಾಂತಿ, ಬಡತನ, ಅಜ್ಞಾನಗಳ ಅಂಧಕಾರವನ್ನು ಸರಿಸಿ, ಸ್ನೇಹ, ಸಹಬಾಳ್ವೆ, ಸತ್ಯ, ನೆಮ್ಮದಿ, ಸುಜ್ಞಾನದ ಬೆಳಕನ್ನು ಎಲ್ಲೆಡೆ ಬೆಳಗಿಸಲಿ ಎಂದು ಹಾರೈಸುತ್ತೇನೆ. ಹಬ್ಬದ ಸಂಭ್ರಮದ ಜೊತೆಗೆ ಪರಿಸರ ಕಾಳಜಿಯನ್ನು ಮರೆಯದಿರಿ. ಹಸಿರು ಪಟಾಕಿಗಳನ್ನೇ ಬಳಸಿ, ಎಳೆಯ ಮಕ್ಕಳು ಪಟಾಕಿ ಸಿಡಿಸುವಾಗ ಹಿರಿಯರು ಅವರ ಬಗ್ಗೆ ಜಾಗೃತೆ ವಹಿಸಿ. ದೀಪಾವಳಿಯನ್ನು ಸಂಭ್ರಮದಿಂದಲೂ, ಸುರಕ್ಷಿತವಾಗಿಯೂ ಆಚರಿಸಿ ಎಂದು ವಿನಂತಿಸುತ್ತೇನೆ. ಮತ್ತೊಮ್ಮೆ ತಮ್ಮೆಲ್ಲರಿಗೂ ದೀಪಾವಳಿಯ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read