ಬೆಂಗಳೂರು : ಖಾಸಗಿ ಅನುದಾನಿತ/ಅನುದಾನರಹಿತ ಶಾಲೆಗಳ ಪ್ರಥಮ ಮಾನ್ಯತೆ/ಮಾನ್ಯತೆ ನವೀಕರಣವನ್ನು ಕರ್ನಾಟಕ ಶಿಕ್ಷಣ ಕಾಯ್ದೆ-1983 ಮತ್ತು ಆರ್.ಟಿ.ಇ ನಿಯಮ-2012ರ ಅಡಿಯಲ್ಲಿ ನೀಡುವ ಬಗ್ಗೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
2025-26ನೇ ಶೈಕ್ಷಣಿಕ ಸಾಲಿಗೆ ನೊಂದಣಿ ಪಡೆದು ಶಾಲೆಯನ್ನು ಪ್ರಾರಂಭಿಸಿರುವ ಎಲ್ಲಾ ಶಾಲೆಗಳು ತಂತ್ರಾಂಶದ ಮೂಲಕ ನಿಯಮಾನುಸಾರ ನಿಗದಿ ಪಡಿಸಿರುವ ದಾಖಲೆ/ಮಾಹಿತಿಗಳನ್ನು ಸಲ್ಲಿಸಿ ಪ್ರಥಮ ಮಾನ್ಯತೆಗೆ ಆನ್ಲೈನ್ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಯಾವುದೇ ಶಾಲೆಯು ನಿಗದಿತ ಅವಧಿಯೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ನಿಯಮಾನುಸಾರ ಮಾನ್ಯತೆ ಪಡೆಯದಿದ್ದಲ್ಲಿ ಶಾಲಾ ನೊಂದಣಿ ಪ್ರಮಾಣಪತ್ರದ ಷರತ್ತಿನಂತೆ ಶಾಲಾ ನೊಂದಣಿಯು ತಂತಾನೆ ರದ್ದಾಗುತ್ತದೆ.
ಶಾಲೆಯು ನೊಂದಣಿ ಪಡೆಯುವಾಗ ಆನ್ಲೈನ್ ಮೂಲಕ ಸಲ್ಲಿಸಿದ ದಾಖಲೆಗಳು ತಂತಾನೆ ಪ್ರಥಮ ಮಾನ್ಯತೆ ಅರ್ಜಿಯಲ್ಲಿ ಸೆಳೆಯಲ್ಪಡುತ್ತವೆ. ಉಳಿದ ಮಾಹಿತಿ/ದಾಖಲೆಗಳನ್ನು ಮತ್ತು ವಾಯಿದೆ ಮುಗಿದ ಪ್ರಕರಣಗಳಲ್ಲಿ ಇತ್ತೀಚಿನ ದಿನಾಂಕಕ್ಕೆ ಚಾಲ್ತಿಯಲ್ಲಿರುವ ದಾಖಲೆಗಳನ್ನು ಮಾತ್ರ ಇಂದೀಕರಿಸಿ ಅರ್ಜಿ ಸಲ್ಲಿಸುವುದು ಎಂದು ಸೂಚಿಸಿದೆ.











