ನವದೆಹಲಿ: ಗರ್ಭಿಣಿ ಮಹಿಳೆಯಿಬ್ಬರನ್ನು ಆಕೆಯ ಮಾಜಿ ಗೆಳೆಯ ಬರ್ಬರವಾಅಗಿ ಹತ್ಯೆಗೈದಿದ್ದು, ತನ್ನ ಪತ್ನಿಯನ್ನು ಕೊಂದಿದ್ದಕ್ಕೆ ಆಕೆಯ ಪತಿ ಕೊಲೆ ಆರೋಪಿಯ ಜೀವನ್ನೂ ತೆಗೆದುರುವ ಘಟನೆ ನವದೆಹಲಿಯಲ್ಲಿ ನಡೆದಿದೆ.
ಕೊಲೆಯಾದ ಮಹಿಳೆ ಶಾಲಿಲಿ (22) ಹಾಗೂ ಅಶು ಅಲಿಯಾಸ್ ಶೈಲೇಂದ್ರ (34). ಶಾಲಿನಿ ತನ್ನ ಪತಿ ಆಕಾಶ್ ಜೊತೆ ತವರು ಮನೆಗೆ ಆಟೋದಲ್ಲಿ ತೆರಳುತ್ತಿದ್ದಳು. ಈ ವೇಳೆ ಬಂದ ಮಾಜಿ ಗೆಳೆಯ ಅಶು ಅಲಿಯಾಸ್ ಶೈಲೇಂದ್ರ ದಾಳಿ ನಡೆಸಿದ್ದಾನೆ. ಪತ್ನಿಯನ್ನು ರಕ್ಷಿಸಲೆಂದು ಶಾಲಿನಿ ಪತಿ ಆಕಾಶ್ ಪ್ರಯತ್ನಿಸಿದ್ದ. ಈ ವೇಳೆ ಆತನ ಮೇಲೂ ಶೈಲೇಂದ್ರ ದಾಳಿ ನಡೆಸಿ, ಹಲ್ಲೆ ಮಾಡಿದ್ದಾನೆ. ಆಟೋದಲ್ಲಿ ಕುಳಿತಿದ್ದ ಶಾಲಿನಿಗೆ ಚಾಕುವಿನಿಂದ ಹಲವು ಬಾರಿ ಇರಿದಿದ್ದಾನೆ. ಈ ವೇಳೆ ಶೈಲೇಂದ್ರನನ್ನು ತಳ್ಳಿ ಕೆಳಕ್ಕೆ ಬೀಳಿಸಿ ಆತನಿಂದ ಚಾಕು ಕಸಿದುಕೊಂಡಿದ್ದ ಆಕಾಶ್ ಶೈಲೇಂದ್ರನನ್ನು ಇರಿದಿದ್ದಾರೆ.
ಚಾಕುವಿನಿಂದ ಗಂಭೀರವಾಗಿ ಇರಿತಕ್ಕೊಳಗಾಗಿದ್ದ ಶಾಲಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಇತ್ತ ಹಲ್ಲೆಗೊಳಗಾಗಿದ್ದ ಶೈಲೇಂದ್ರ ಕೂಡ ಸಾವನ್ನಪ್ಪಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಆಕಾಸ್ ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಇದ್ದಾರೆ.