ಭೋಪಾಲ್: ಗೆಳೆಯರೇ ಸ್ನೇಹಿತನ ಕತ್ತು ಸೀಳಿ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆಗೈದಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ.
ಇಲ್ಲಿನ ಶಾಮ್ ನಗರದಲ್ಲಿ ಈ ದುರಂತ ಸಂಭವಿಸಿದೆ. 25 ವರ್ಷದ ಅಶಿಶ್ ಕೊಲೆಯಾಗಿರುವ ಯುವಕ. ಗಂಟಲು ಸೀಳಿ ತಲೆಯನ್ನು ಕಲ್ಲಿನಿಂದ ಜಜ್ಜಿದ ಸ್ಥಿತಿಯಲ್ಲಿ ಆಶಿಶ್ ಶವ ಪತ್ತೆಯಾಗಿದೆ.
ಆಶಿಶ್ ಹಾಗೂ ರಂಜಿತ್ ಎಂಬುವವರು ಸ್ನೇಹಿತರಾಗಿದ್ದರು. ಆದರೆ ಆಶಿಶ್ ತನ್ನ ತಾಯಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನಕ್ಕೆ ರಂಜಿತ್ ಎಂಬಾತ ತನ್ನ ಗೆಳೆಯರೊಂದಿಗೆ ಸೇರಿ ಆಶಿಶ್ ನನ್ನು ಹತ್ಯೆ ಮಾಡಿದ್ದಾನೆ. ಆಶಿಶ್ ತಡರಾತ್ರಿ ರಂಜಿತ್ ಮನೆ ಬಳಿ ಬಂದಿರುವುದನ್ನು ನೋಡಿದ್ದ ರಂಜಿತ್ ತನ್ನ ಸ್ನೇಹಿತರಾದ ನಿಖಿಲ್ ಮತ್ತು ವಿನಯ್ ಜೊತೆಗೂಡಿ ಆಶಿಶ್ ಕತ್ತು ಸೀಳಿ ಬಳಿಕ ತಲೆಯನ್ನು ಕಲ್ಲಿನಿಂದ ಜಜ್ಜ ಕೊಲೆಗೈದು ಎಸ್ಕೇಪ್ ಆಗಿದ್ದಾರೆ.
ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ.