ಬೆಂಗಳೂರು : ನಾನು RSS ಸಂಘಟನೆಯನ್ನೇ ನಿಷೇಧಿಸಬೇಕು ಎಂದು ಪತ್ರ ಬರೆದಿಲ್ಲ ಎಂದು ಮತ್ತೆ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ. ”ನಾನು ಆರ್ಎಸ್ಎಸ್ ಸಂಘಟನೆಯನ್ನೇ ನಿಷೇಧಿಸಬೇಕು ಎಂದು ಪತ್ರ ಬರೆದಿಲ್ಲ. ಆರ್ಎಸ್ಎಸ್ ರೀತಿಯ ಕೆಲವು ಸಂಘ-ಸಂಸ್ಥೆಗಳು ಯುವಕರ ಮನಸಿನಲ್ಲಿ ಅಸಾಂವಿಧಾನಿಕ ವಿಚಾರಗಳನ್ನು ಹುಟ್ಟುಹಾಕುತ್ತಿವೆ. ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಇಲ್ಲದೆ ಅವರು ಚಟುವಟಿಕೆ ನಡೆಸಲು ಅವಕಾಶ ನೀಡಬಾರದು ಎಂದಿದ್ದೇನೆ. ನನ್ನ ಆಗ್ರಹ ತರ್ಕಬದ್ಧವಾಗಿದೆ’ ಎಂದಿದ್ದಾರೆ.
”ನೂರು ವರ್ಷ ಇತಿಹಾಸ ಇರುವ ವಿಶ್ವದ ಅತಿ ದೊಡ್ಡ ಎನ್ಜಿಒಗೆ ದೇಶ, ಸಂವಿಧಾನ, ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದವರಿಗಾಗಿ ಮಾಡಿದ ಹತ್ತು ಸಾಧನೆಗಳ ಪಟ್ಟಿ ನೀಡಲು ಏಕೆ ಸಾಧ್ಯವಾಗುತ್ತಿಲ್ಲ? ನನ್ನ ನಿಲುವುಗಳ ಕುರಿತು ಈ ದಿನ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದೇನೆ ಎಂದಿದ್ದಾರೆ.
“ಆರ್ಎಸ್ಎಸ್ ನಿಷೇಧವಾಗಬೇಕು“ ಇದು ಜೆಡಿಎಸ್ ನವರ ಮನ್ ಕಿ ಬಾತ್!
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) October 17, 2025
ಈ ಮನದಾಳದದ ಮಾತುಗಳನ್ನು ಇಂದು ಮರೆತಿದ್ದಾರೆಯೇ ಅಥವಾ ಮರೆಯಲು ಪ್ರಯತ್ನಿಸುತ್ತಿದ್ದಾರೆಯೇ?
ಈ ಹಳೆಯ ಪಾಳೆಯುಳಿಕೆಯಂತಹ ಮಾತುಗಳನ್ನು ಈ ಸಂದರ್ಭದಲ್ಲಿ ಬಿಜೆಪಿಯವರಿಗೆ ನೆನಪು ಮಾಡಲು ಬಯಸುತ್ತೇನೆ. pic.twitter.com/nG29YD1dIl