ಬೆಂಗಳೂರು: ಇ-ಖಾತಾ ಮಾಡಿಕೊಡಲು ಹಣಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿಗಳನ್ನು ತಕ್ಷಣ ಅಮಾನತುಗೊಳಿಸುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ.
ಬೆಂಗಳೂರಿನ ಟಿ.ಸಿಪಾಳ್ಯದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು ನಡಿಗೆ ಕಾರ್ಯಕ್ರಮ ನಡೆಸಿದ್ದು, ಈ ವೇಳೆ ಇಕೋ ಪಾರ್ಕ್ ನಲ್ಲಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿ ಸಮಸ್ಯೆಗಳನ್ನು ಆಲಿಸಿದರು.
ಈ ವೇಳೆ ಸ್ಥಳೀಯ ನಿವಾಸಿಗಳು ಇ ಖಾತಾ ಮಾಡಿಕೊಡಲು ಕೆಲ ಅಧಿಕಾರಿಗಳು ಹಣ ಕೇಳುತ್ತಿದ್ದಾರೆ ಎಂದು ದೂರಿದರು. ಹಣ ಕೇಳಿದ ಅಧಿಕಾರಿಗಳ ಹೆಸರನ್ನು ಹೇಳುವಂತೆ ಡಿಸಿಎಂ ತಿಳಿಸಿದರು. ಇದಕ್ಕೆ ವ್ಯಕ್ತಿಯೋರ್ವರು ಎಆರ್ ಒ ಬಸವರಾಜ್ ಹಾಗೂ ಆರ್ ಐ ವಿಜನಪುರ ಎಂಬ ಅದಿಕಾರಿಗಳು ಇ-ಖಾತೆ ಮಾಡಿಕೊಡಲು 15 ಸಾವಿರ ಹಣ ಕೇಳುತ್ತಿದ್ದಾರೆ ಎಂದು ದೂರು ನೀಡಿದರು.
ಹಣ ಕೇಳಿದ ಅಧಿಕಾರಿಗಳನ್ನು ತಕ್ಷಣ ಸಸ್ಪೆಂಡ್ ಮಾಡುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಥಳದಲ್ಲಿಯೇ ಸೂಚನೆ ನೀಡಿದರು.