BIG NEWS: ಇ.ಡಿಯಿಂದ 2,385 ಕೋಟಿ ಮೌಲ್ಯದ ಕ್ರಿಪ್ಟೋ ಕರೆನ್ಸಿ ಮುಟ್ಟುಗೋಲು

ನವದೆಹಲಿ: ಒಕ್ಟಾ ಎಫ್ ಎಕ್ಸ್ ಪೊಂಜಿ ಹಗರಣದಲ್ಲಿ ಬರೋಬ್ಬರಿ 2,385 ಕೋಟಿ ಮೌಲ್ಯದ ಕ್ರಿಪ್ಟೋ ಕರೆನ್ಸಿಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ.

ಅಕ್ರಮ ಹಣ ವರ್ಗಾವಣೆ ವಿರೋಧಿ ಕಾನೂನಿನ ಅಡಿಯಲ್ಲಿ ಈ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಪ್ರಕರಣದಲ್ಲಿ ಸ್ಪ್ಯಾನಿಷ್ ಮಾಸ್ಟರ್ ಮೈಂಡ್ ನನ್ನು ಆತನ ದೇಶದಲ್ಲಿಯೇ ಬಂದಿಸಲಾಗಿದೆ ಎಂದು ಇ.ಡಿ ತಿಳಿಸಿದೆ.

ಒಕ್ಟಾ ಎಫ್ ಎಕ್ಸ್ ವಿದೇಶಿ ವಿನಿಮಯ ವೇದಿಕೆ ಮೂಲಕ ಹೆಚ್ಚಿನ ಆದಾಯದ ಸುಳ್ಳು ಭರವಸೆ ನೀಡಿ ಹಲವಾರು ಹೂಡಿಕೆದಾರರನ್ನು ವಂಚಿಸಿದ್ದ ಹಗರಣ ಇದಾಗಿದೆ. ಅನಧಿಕೃತ ವಿದೇಶಿ ವಿನಿಮಯ ವೇದಿಕೆ ಒಕ್ಟಾ ಎಫ್ ಎಕ್ಸ್ ವಿರುದ್ಧ ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದಂತೆ 2,385 ಕೋಟಿ ಮೌಲ್ಯದ ಕ್ರಿಪ್ಟೋ ಕರೆನ್ಸಿ ಜಪ್ತಿ ಮಾಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read