ಶಿಶು ಅಭಿವೃದ್ಧಿ ಯೋಜನೆ ಮಡಿಕೇರಿ ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆ/ ಸಹಾಯಕಿಯರನ್ನು ಗುರುತಿಸಲು ಸರ್ಕಾರದ ನಿರ್ದೇಶನದಂತೆ ಕಾರ್ಯಕರ್ತೆ ಹುದ್ದೆಗೆ ದ್ವಿತೀಯ ಪಿ.ಯು.ಸಿ ಯಲ್ಲಿ ತೆರ್ಗಡೆಯಾದ ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಅಂಗನವಾಡಿ ಸಹಾಯಕಿ ಹುದ್ದೆಗೆ ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾದ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಕಂದಾಯ ಗ್ರಾಮಗಳಲ್ಲಿ ಖಾಲಿ ಇರುವ ಅಂಗನವಾಡಿ ಕೇಂದ್ರಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ನವೆಂಬರ್ 13 ರ ಸಂಜೆ 5.30 ಗಂಟೆಯೊಳಗೆ ಅಥವಾ ಮುಂಚಿತವಾಗಿ ಅರ್ಜಿಗಳನ್ನು https://karnemakaone.kar.nic/abcd/ ನಲ್ಲಿ ಆನ್‍ಲೈನ್ ಮುಖಾಂತರ ಸಲ್ಲಿಸಲು ಸೂಚಿಸಿದೆ. .
ಅರ್ಜಿಯೊಂದಿಗೆ (ಆನ್‍ಲೈನ್‍ನಲ್ಲಿ) ಜನನ ಪ್ರಮಾಣ ಪತ್ರ/ಜನ್ಮ ದಿನಾಂಕವಿರುವ ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ, ನಿಗದಿತ ವಿದ್ಯಾರ್ಹತೆಯ ಅಂಕಪಟ್ಟಿ, ತಹಶೀಲ್ದಾರರು/ ಉಪ ತಹಶೀಲ್ದಾರರಿಂದ ಪಡೆದ ಮೂರು ವರ್ಷದೊಳಗಿನ ವಾಸಸ್ಥಳ ದೃಡೀಕರಣ ಪತ್ರ ಅಭ್ಯರ್ಥಿಗಳ ಜಾತಿ ಪ್ರಮಾಣ ಪತ್ರ, ಪತಿಯ ಮರಣ ಪ್ರಮಾಣ ಪತ್ರ ಹಾಗೂ ವಿಧವಾ ಪ್ರಮಾಣ ಪತ್ರ (ವಿಧವಾ ವೇತನದ ದೃಢೀಕರಣವನ್ನು ಪರಿಗಣಿಸುವುದಿಲ್ಲ), ಅಂಗವಿಕಲತೆ ಪ್ರಮಾಣ ಪತ್ರ (ಅಂಗವಿಕಲ ವೇತನದ ದೃಢೀಕರಣವನ್ನು ಪರಿಗಣಿಸುವುದಿಲ್ಲ), ವಿಚ್ಛೇದಿತರಾಗಿದ್ದಲ್ಲಿ ವಿಚ್ಛೇಧನ ಪ್ರಮಾಣ ಪತ್ರ. (ನ್ಯಾಯಾಲಯದಿಂದ ವಿಚ್ಛೇಧನ ಪತ್ರ), ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ನಡೆಸಲ್ಪಟ್ಟ ಮಾಜಿ ದೇವದಾಸಿಯರ ಸಮೀಕ್ಷೆಯ ಪಟ್ಟಿಯಲ್ಲಿರುವ ಮಾಜಿ ದೇವದಾಸಿಯರ ಮಕ್ಕಳು ಎಂಬುದರ ಬಗ್ಗೆ ಮಹಿಳಾ ಅಭಿವೃದ್ಧಿಗಳಿಂದ ಪಡೆದ ಪ್ರಮಾಣ ಪತ್ರ, ಇಲಾಖಾ ಸುಧಾರಣಾ ಸಂಸ್ಥೆ/ ರಾಜ್ಯ ಮಹಿಳಾ ನಿಲಯಗಳ ನಿವಾಸಿಗಳು ಕನಿಷ್ಠ 3 ವರ್ಷ ಸಂಸ್ಥೆಯಲ್ಲಿರಬೇಕು. ಹಾಗೂ ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಂದ ಪಡೆದ ನಿವಾಸಿ ಪ್ರಮಾಣ ಪತ್ರ, ಯೋಜನಾ ನಿರಾಶ್ರಿತರ ಬಗ್ಗೆ ತಹಶೀಲ್ದಾರ್ ಅವರಿಂದ ಪಡೆದ ಪ್ರಮಾಣ ಪತ್ರ, ಆಧಾರ್ ಕಾರ್ಡ್/ ಮತದಾರರ ಗುರುತಿನ ಚೀಟಿ/ ರೇಷನ್ ಕಾರ್ಡ್, ಎಲ್ಲಾ ದಾಖಲಾತಿಗಳನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಣ ಮಾಡಿಸಿ ಸಲ್ಲಿಸುವುದು.
ಅಭ್ಯರ್ಥಿಗಳು ಸಲ್ಲಿಸಲಾದ ಅಗತ್ಯ ದಾಖಲಾತಿಗಳಾದ ಅಂಕಪಟ್ಟಿ, ವಾಸಸ್ಥಳ ದೃಢೀಕರಣ ಪತ್ರ, ಜಾತಿ ದೃಢೀಕರಣ ಪತ್ರಗಳು ಹಾಗೂ ಇತರೆ ದಾಖಲಾತಿಗಳು ಕ್ರಮಬದ್ದವಾಗಿದ್ದಲ್ಲಿ ವಿದ್ಯಾರ್ಹತೆಯಲ್ಲಿ ಪಡೆದ ಅಂಕ ಹಾಗೂ ಬೋನಸ್ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆಯನ್ನು ನಿಯಮಾನುಸಾರ ನಿರ್ಧರಿಸಲಾಗುವುದು ಮತ್ತು ಯಾವುದೇ ಸಂದರ್ಶನ ಪ್ರಕ್ರಿಯೆ ಇರುವುದಿಲ್ಲ. ಇಲಾಖೆ ಕಾಲಕಾಲಕ್ಕೆ ಹೊರಡಿಸುವ ಆದೇಶಗಳಿಗೆ ಅನುಗುಣವಾಗಿ ಬದಲಾವಣೆ/ ಮಾರ್ಪಡಿಗೆ ಒಳಪಟ್ಟಿರುತ್ತದೆ. ನೇಮಕಾತಿಗೆ ಸಂಬಂಧಿಸಿದಂತೆ ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮ ತೀರ್ಮಾನವಾಗಿದೆ.
ಆಯ್ಕೆಯಾದ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಹೆಯಾನ ರೂ.12 ಸಾವಿರ ಗೌರವಧನ ಪಾವತಿಸಲಾಗುವುದು. ಹಾಗೂ ಸಹಾಯಕಿಯರಿಗೆ ರೂ.6 ಸಾವಿರ ಗೌರವಧನ ಪಾವತಿಸಲಾಗುವುದು ಎಂದು ಮಡಿಕೇರಿ ಶಿಶು ಅಭಿವೃದ್ಧಿಯ ಯೋಜನಾಧಿಕಾರಿ ಅವರು ತಿಳಿಸಿದ್ದಾರೆ.