ಬೆಂಗಳೂರು : ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-12 ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. ಸದ್ಯ ಬಿಗ್ ಬಾಸ್ ಮನೆಯಿಂದ ಡಾಗ್ ಸತೀಶ್ ಔಟ್ ಆಗಿದ್ದಾರೆ.
ಕಳೆದ ವಾರ ಎಲಿಮಿನೇಷನ್ ಇಲ್ಲದ ಕಾರಣ ಸ್ಪರ್ಧಿಗಳು ರಿಲೀಫ್ ಆಗಿದ್ದರು. ಆದರೆ ನಿನ್ನೆ ರಾತ್ರಿ ಬಿಗ್ ಬಾಸ್ ಧಿಡೀರ್ ಆಗಿ ಎಲಿಮಿನೇಷನ್ ಪ್ರಕ್ರಿಯೆ ನಡೆಸಿದೆ.
ಬಿಗ್ ಬಾಸ್ ಸ್ಪರ್ಧಿಗಳೆಲ್ಲರನ್ನ ಕರೆದು ನಿಮ್ಮಲ್ಲಿ ಯಾರು ಮನೆಯಿಂದ ಹೊರಗೆ ಹೋಗಬೇಕು ಎಂದು ಕೇಳಿದರು. ಆಗ ಹಲವರು ಡಾಗ್ ಸತೀಶ್ ಅವರ ಹೆಸರು ಸೂಚಿಸಿದರು. ಆದ್ದರಿಂದ ಮೂರನೇ ವಾರಕ್ಕೆ ಸತೀಶ್ ಬಿಗ್ ಬಾಸ್ಮ ನೆಯಿಂದ ಎಲಿಮಿನೇಟ್ ಆದರು.