ಬೆಂಗಳೂರು : ರಾಜ್ಯ ಸರ್ಕಾರದ ಸಭೆ, ಸಮಾರಂಭಕ್ಕೆ ಜನಪ್ರತಿನಿಧಿಗಳನ್ನು ಆಹ್ವಾನಿಸಲು ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದ್ದು, ಈ ನಿಯಮಗಳ ಪಾಲನೆ ಕಡ್ಡಾಯವಾಗಿದೆ.
ಸರ್ಕಾರದ ಸಭೆ ಮತ್ತು ಸಮಾರಂಭಗಳಿಗೆ ಜನಪ್ರತಿನಿಧಿಗಳನ್ನು ಆಹ್ವಾನಿಸುವ ಬಗ್ಗೆ, ಅನುಸರಿಸಬೇಕಾದ ಶಿಷ್ಟಾಚಾರದ ಕುರಿತು ಸಮಗ್ರವಾದ ಸೂಚನೆಗಳನ್ನು ಈಗಾಗಲೇ ಸರ್ಕಾರದ ಸುತ್ತೋಲೆ ಸಂಖ್ಯೆ: ಸಿಆಸುಇ 34 ಹೆಚ್ ಪಿಎ 2018, ದಿನಾಂಕ:16.04.2019ರಲ್ಲಿ ಹೊರಡಿಸಲಾಗಿರುತ್ತದೆ.ಸಾರ್ವಜನಿಕ ಸರ್ಕಾರಿ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಗಳಲ್ಲಿ ಆಹ್ವಾನಿತರ ಹಾಜರಾಗುವಿಕೆಯನ್ನು ಖಚಿತಪಡಿಸಿಕೊಳ್ಳದೇ ಮುದ್ರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಆಹ್ವಾನಿತರ ಸಂಖ್ಯೆಯು ಹೆಚ್ಚಾಗುತ್ತಿದ್ದು ಶಿಷ್ಟಾಚಾರದನ್ವಯ ಆಸನ ವ್ಯವಸ್ಥೆಯನ್ನು ಏರ್ಪಡಿಸುವಲ್ಲಿ ಗೊಂದಲವಾಗುತ್ತಿರುವುದರಿಂದ ಸರ್ಕಾರಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಹಾಗೂ ಸರ್ಕಾರಿ ಸಾರ್ವಜನಿಕ ಕಾರ್ಯಕ್ರಮಗಳನ್ನು ಸುಗಮವಾಗಿ ಮತ್ತು ಘನತೆಯಿಂದ ನಡೆಸಲು ಅನುವಾಗುವಂತೆ ದಿನಾಂಕ:16.04.2019ರ ಸುತ್ತೋಲೆಯಲ್ಲಿನ ಮಾರ್ಗಸೂಚಿಗಳನ್ನು ಮಾರ್ಪಡಿಸಿ ಈ ಕೆಳಕಂಡಂತೆ ಹೊಸ ಮಾರ್ಗ ಸೂಚಿಗಳನ್ನು ಅಧಿಸೂಚಿಸಲಾಗಿದೆ.
ಸರ್ಕಾರಿ ಕಾರ್ಯಕ್ರಮಗಳನ್ನು ಈ ಕೆಳಕಂಡಂತೆ ವರ್ಗೀಕರಿಸಿದೆ. –
(a) ರಾಜ್ಯ ಮಟ್ಟದ ಕಾರ್ಯಕ್ರಮಗಳು: ಈ ಕಾರ್ಯಕ್ರಮಗಳು ರಾಜ್ಯ,
ಸರ್ಕಾರದ ಒಂದು ಇಲಾಖೆಯು ಪ್ರತ್ಯೇಕವಾಗಿ ಅಥವಾ ಇನ್ನೊಂದು ಇಲಾಖೆಯ ಅಂಗಸಂಸ್ಥೆಗಳು / ಸ್ವಯಂ ಸೇವಾ / ಇತರೆ ಸಂಸ್ಥೆಗಳ ಸಹಯೋಗದೊಂದಿಗೆ ಒಂದು ಜಿಲ್ಲೆಗಿಂತ ಹೆಚ್ಚಿನ ಜಿಲ್ಲೆಗಳಿಗೆ ಸಂಬಂಧಿಸಿದ ಯೋಜನೆಗಳು ಅಥವಾ ಕಾರ್ಯಕ್ರಮಗಳ ಕುರಿತು ಆಯೋಜಿಸಲಾಗುತ್ತದೆ.
(b) ಇಲಾಖೆಗಳು ಆಯೋಜಿಸುವ ಜಿಲ್ಲಾ ಮಟ್ಟದ ಕಾರ್ಯಕ್ರಮಗಳು: – ಈ
ಕಾರ್ಯಕ್ರಮಗಳು ರಾಜ್ಯ ಸರ್ಕಾರದ ಒಂದು ಇಲಾಖೆಯು ಪ್ರತ್ಯೇಕವಾಗಿ ಅಥವಾ ಇನ್ನೊಂದು ಇಲಾಖೆ/ ಅಂಗಸಂಸ್ಥೆಗಳು / ಸ್ವಯಂ ಸೇವಾ / ಇತರೆ ಸಂಸ್ಥೆಗಳ ಸಹಯೋಗದೊಂದಿಗೆ ಒಂದು ಜಿಲ್ಲೆಗೆ ಸಂಬಂಧಿಸಿದ ಯೋಜನೆಗಳು ಅಥವಾ ಕಾರ್ಯಕ್ರಮಗಳ ಕುರಿತು ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಅಥವಾ ಜಿಲ್ಲೆಯ ಇತರ ಭಾಗದಲ್ಲಿ ಆಯೋಜಿಸಲಾಗುತ್ತದೆ.
(c) ಜಿಲ್ಲಾಡಳಿತವು ಆಯೋಜಿಸುವ ಜಿಲ್ಲಾ ಮಟ್ಟದ ಕಾರ್ಯಕ್ರಮಗಳು: – ಈ
ಕಾರ್ಯಕ್ರಮಗಳು ಜಿಲ್ಲಾಡಳಿತವು ಆಯಾ ಜಿಲ್ಲೆಗಳ ಯೋಜನೆಗಳಿಗೆ/ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಕೇಂದ್ರ ಸ್ನಾನದಲ್ಲಿ ಅಥವಾ ಜಿಲ್ಲೆಯ ಇತರೆ ಭಾಗದಲ್ಲಿ ಆಯೋಜಿಸಲಾಗುತ್ತದೆ.
(d) ತಾಲ್ಲೂಕು ಮಟ್ಟದ ಕಾರ್ಯಕ್ರಮಗಳು: -ಈ ಕಾರ್ಯಕ್ರಮಗಳು
ಜಿಲ್ಲಾಡಳಿತ ಅಥವಾ ತಾಲ್ಲೂಕು ಆಡಳಿತವು ಒಂದು ತಾಲ್ಲೂಕಿಗೆ ಸಂಬಂಧಿಸಿದ ಯೋಜನೆಗಳು ಅಥವಾ ಕಾರ್ಯಕ್ರಮಗಳ ಕುರಿತು ತಾಲ್ಲೂಕಿನ ಕೇಂದ್ರ ಸ್ಥಾನದಲ್ಲಿ ಅಥವಾ ತಾಲ್ಲೂಕಿನ ಇತರೆ ಭಾಗದಲ್ಲಿ ಆಯೋಜಿಸಲಾಗುತ್ತದೆ.
(e) ರಾಜ್ಯದಲ್ಲಿ ಪ್ರಾಯೋಜಿತ/ಬೆಂಬಲಿತ ಕಾರ್ಯಕ್ರಮಗಳು: ಈ ಕಾರ್ಯಕ್ರಮಗಳು ರಾಜ್ಯಕ್ಕೆ
ಆಯೋಜಿಸುವ ಕೇಂದ್ರ
ಪುರಸ್ಕೃತ/
ಸಂಬಂಧಿಸಿದ ಕೇಂದ್ರದ ಪುರಸ್ಕೃತ/ ಪ್ರಾಯೋಜಿತ/ಬೆಂಬಲಿತ ಯೋಜನೆಗಳು ಅಥವಾ ಕಾರ್ಯಕ್ರಮಗಳ ಕುರಿತು ರಾಜ್ಯದ ಸಹಯೋಗದೊಂದಿಗೆ ರಾಜ್ಯದ ಕೇಂದ್ರ ಸ್ನಾನ ಅಥವಾ ರಾಜ್ಯದ ಇತರೆ ಭಾಗದಲ್ಲಿ ಆಯೋಜಿಸಲಾಗುತ್ತದೆ.
ರಾಜ್ಯ ಮಾರ್ಗಸೂಚಿಗಳು:-ಮಟ್ಟದಲ್ಲಿ ಆಯೋಜಿಸುವ ಕಾರ್ಯಕ್ರಮಗಳ
(a) ಉದ್ಘಾಟನೆ: -ರಾಜ್ಯ ಮಟ್ಟದ ಕಾರ್ಯಕ್ರಮಗಳನ್ನು ಈ ಕೆಳಕಂಡ ಗಣ್ಯರು.
ಉದ್ಘಾಟಿಸುತ್ತಾರೆ:-
ಮಾನ್ಯ ಮುಖ್ಯ ಮಂತ್ರಿಗಳು / ಮಾನ್ಯ ಉಪ ಮುಖ್ಯ ಮಂತ್ರಿಗಳು / ಸಂಬಂಧಪಟ್ಟ ಇಲಾಖಾ ಸಚಿವರು /ಇಲಾಖಾ ಸಚಿವರು ಸೂಚಿಸುವ ಯಾವುದೇ ಗಣ್ಯರು.
(b) ಅಧ್ಯಕ್ಷತೆ:-
() ಮಾನ್ಯ ಮುಖ್ಯ ಮಂತ್ರಿಗಳು / ಉಪ ಮುಖ್ಯ ಮಂತ್ರಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರೆ, ಇಲಾಖಾ ಸಚಿವರು ಅಧ್ಯಕ್ಷತೆ ವಹಿಸುತ್ತಾರೆ.
(ii) ಸಚಿವರು ಕಾರ್ಯಕ್ರಮವನ್ನು ಉದ್ಘಾಟಿಸಿದಾಗ, ಕಾರ್ಯಕ್ರಮವು ನಡೆಯುವ ಸ್ಥಳದ ಸ್ಥಳೀಯ ಶಾಸಕರು ಅಧ್ಯಕ್ಷತೆ ವಹಿಸುತ್ತಾರೆ.
(iii) ಇತರೆ ಗಣ್ಯರು ಕಾರ್ಯಕ್ರಮವನ್ನು ಉದ್ಘಾಟಿಸಿದಾಗ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಾರು ವಹಿಸಬೇಕೆಂಬುದರ ಕುರಿತು ಇಲಾಖಾ ಸಚಿವರು ನಿರ್ಧರಿಸುತ್ತಾರೆ.
(c) ಮುಖ್ಯ ಅತಿಥಿಗಳು/ಗೌರವಾನ್ವಿತ ಅತಿಥಿಗಳು: –
() ಇಲಾಖಾ ಸಚಿವರು ಆಹ್ವಾನ ಪತ್ರಿಕೆ ಹಾಗೂ ವೇದಿಕೆಯ ಮೇಲೆ ಆಸೀನರಾಗುವ ಗಣ್ಯರ ಹೆಸರುಗಳನ್ನು ಅನುಬಂಧದಲ್ಲಿರುವ ಪಟ್ಟಿಯಿಂದ ಒಂಬತ್ತು ಸಂಖ್ಯೆಗಳಿಗೆ ಮೀರದಂತೆ ಹಾಗೂ ಅನಿವಾರ್ಯ ಸಂದರ್ಭದಲ್ಲಿ ಗಣ್ಯರ ಸಂಖ್ಯೆಯನ್ನು 13 ಕ್ಕೆ ಮೀರದಂತೆ ಆಯ್ಕೆ ಮಾಡುವುದು. ವೇದಿಕೆಯ ಮೇಲೆ ಆಸೀನರಾಗುವ ಗಣ್ಯರ ಹೆಸರುಗಳಲ್ಲಿ ಸ್ಥಳೀಯ ಶಾಸಕರನ್ನು ಕಡ್ಡಾಯವಾಗಿ ಸೇರಿಸತಕ್ಕದ್ದು.
(ii) ಸರ್ಕಾರಿ ಕಾರ್ಯಕ್ರಮವನ್ನು ವಿಧಾನ ಸೌಧ, ವಿಕಾಸ ಸೌಧದ ಆವರಣದಲ್ಲಿ ಆಯೋಜಿಸಿದಾಗ ಸಂಬಂಧಿತ ಇಲಾಖೆ ಸಚಿವರು ಮಾನ್ಯ ವಿಧಾನ ಪರಿಷತ್ತಿನ ಸಭಾಪತಿ ಹಾಗೂ ವಿಧಾನ ಸಭೆಯ ಸಭಾಧ್ಯಕ್ಷರ ಸಹಮತಿಯನ್ನು ಪಡೆದು ಅವರುಗಳನ್ನು ವೇದಿಕೆಯ ಮೇಲೆ ಆಸೀನರಾಗುವ ಗೌರವಾನ್ವಿತ ಅತಿಥಿಗಳನ್ನಾಗಿ ಆಹ್ವಾನಿಸತಕ್ಕದ್ದು.
(d) ಆಯೋಜನೆ:-
(i) ಇಲಾಖೆಯು ಆಯೋಜಿಸುವ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಆಹ್ವಾನ ಪತ್ರಿಕೆ ಮತ್ತು ವೇದಿಕೆಯ ಮೇಲೆ ಆಸೀನರಾಗುವ ಗೌರವಾನ್ವಿತ ಅತಿಥಿಗಳ ವಿವರಗಳನ್ನು ಮತ್ತು ಅವರಿಗೆ ಕಾಯ್ದಿರಿಸುವ ಆಸನದ ವಿವರಗಳನ್ನುಳ್ಳ ವೇದಿಕೆ ಯೋಜನೆಯನ್ನು ತಯಾರಿಸಿ ಇಲಾಖಾ ಸಚಿವರಿಂದ ಅನುಮೋದಿಸಿಕೊಳ್ಳುವುದು.
(ii) ಸಂಬಂಧಪಟ್ಟ ಸಚಿವರ ಅನುಮೋದನೆಯೊಂದಿಗೆ ಕಾರ್ಯಕ್ರಮದ / ಸಮಾರಂಭದ ಶಿಷ್ಟಾಚಾರದ ಮೇಲ್ವಿಚಾರಣೆಯ ಒಟ್ಟಾರೆ ಉಸ್ತುವಾರಿಗಾಗಿ ಇಲಾಖೆಯ ಒಬ್ಬ ಹಿರಿಯ ಅಧಿಕಾರಿಯನ್ನು ನೇಮಿಸುವುದು. ಇದರಲ್ಲಿ ಹಾಜರಾತಿ ದೃಢೀಕರಣ, ಸಮಾರಂಭದ ಹಿನ್ನೆಲೆ ಟಿಪ್ಪಣಿ ಸಿದ್ದಪಡಿಸಿ ಕಳುಹಿಸುವುದು, ಮುಖ್ಯ ಅತಿಥಿ ಮತ್ತು ಗೌರವಾನಿತಅತಿಥಿಗಳ ಸ್ವಾಗತ ಮತ್ತು ಬೀಳ್ಕೊಡುವುದು ಸೇರಿರುತ್ತವೆ.











