ಮೈಸೂರು : ದೈವದ ಅನುಮತಿ ಪಡೆದೇ ಕಾಂತಾರ-1 ಸಿನಿಮಾ ಮಾಡಿದ್ದೇನೆ ಎಂದು ವಿವಾದಗಳಿಗೆ ನಟ ರಿಷಬ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.
ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
ದೇವ ದೇವರ ವಿಚಾರ ಸಿನಿಮಾದಲ್ಲಿ ನೋಡಿದ್ದೇನೆ, ಯಾರು ಏನ್ ಬೇಕಾದ್ರೂ ಮಾತನಾಡಲಿ ನಾನು ಹೇಳಲ್ಲ. ಇಡೀ ತಂಡದ ಮೇಲೆ ದೈವದ ಆಶೀರ್ವಾದವಿದೆ. ಯಾರೂ ಕೂಡ ದೈವದ ರೀತಿ ನಟನೆ ಮಾಡಬಾರದು.
ಸಿನಿಮಾದ ಯಶಸ್ಸು ಮೊದಲು ಸಲ್ಲಬೇಕಾಗಿದ್ದು, ಕನ್ನಡಿಗರಿಗೆ. ಸಿನಿಮಾವನ್ನು ಒಪ್ಪಿಕೊಂಡ ರೀತಿ ನೋಡಿ ನನಗೆ ಬಹಳ ಸಂತೋಷವಾಗಿದೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದುಕೊಂಡು ಹೋಗೋಣ ಅಂತ ಬಂದಿದ್ದೇವೆ ಎಂದರು.ಕಾಂತಾರಾ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ನಾಡಿನ ಹಾಗೂ ದೇಶದ ಜನರು ಅದ್ಭುತವಾದ ಯಶಸ್ಸು ನೀಡಿದ್ದಾರೆ. ತುಂಬಾ ಖುಷಿಯಿದೆ ಎಂದರು. ಈ ಬಾರಿಯೂ ಜನರು ಒಪ್ಪಿಕೊಂಡ ರೀತಿ ಸಂತೋಷವಾಗಿದೆ ಎಂದರು.