ಬೆಂಗಳೂರು : ರಾಜ್ಯದಲ್ಲಿರುವ 474 ಶಾಲೆಗಳನ್ನ ‘KPS’ ಶಾಲೆಗಳಾಗಿ ಉನ್ನತೀಕರಿಸಿ ಸರ್ಕಾರ ಆದೇಶ ಹೊರಡಿಸಿದೆ.
2025-26 ಮತ್ತು 2026-27ನೇ ಸಾಲುಗಳಲ್ಲಿ ಈ ಆದೇಶದೊಂದಿಗೆ ಅನುಬಂಧಿಸಿರುವ ರಾಜ್ಯದಲ್ಲಿರುವ ಆಯ್ಕೆ 500 ಸರ್ಕಾರಿ ಶಾಲೆಗಳನ್ನು (ಮ್ಯಾಗ್ನೆಟ್ ಶಾಲೆಗಳು) ಗುರುತಿಸಿ ರಾಜ್ಯ ಆಯವ್ಯಯದ ಅನುದಾನ ಮತ್ತು ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ ಸಾಲಯೋಜನೆಯಡಿ ಅನುದಾನದಲ್ಲಿ ಹೆಚ್ಚುವರಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮುಂದಿನ ಕ್ರಮಗಳಿಗೆ ಒಳಪಟ್ಟು ಸುಸಜ್ಜಿತ ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಉನ್ನತೀಕರಿಸಲು (ಅನುಬಂಧ-1 ರಲ್ಲಿ 474 ಶಾಲೆಗಳನ್ನು ಉನ್ನತೀಕರಿಸಲು ಮಂಜೂರಾತಿ ನೀಡಲಾಗಿದ್ದು ಬಾಕಿ 26 ಶಾಲೆಗಳಿಗೆ ಮುಂದಿನ ದಿನಗಳಲ್ಲಿ ಮಂಜೂರಾತಿ ನೀಡಲಾಗುವುದು) ಮತ್ತು ಕಲ್ಯಾಣ ಕರ್ನಾಟಕ ವ್ಯಾಪ್ತಿಯ 07 ಜಿಲ್ಲೆಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ 2025-26 ಮತ್ತು 2026-27ನೇ ಸಾಲುಗಳಲ್ಲಿ ಆಯ್ದ 200 ಸರ್ಕಾರಿ ಶಾಲೆಗಳನ್ನು (ಮ್ಯಾಗ್ನೆಟ್ ಶಾಲೆಗಳು) ಗುರುತಿಸಿ ಹೆಚ್ಚುವರಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮುಂದಿನ ಕ್ರಮಗಳಿಗೆ ಒಳಪಟ್ಟು ಸುಸಜ್ಜಿತ ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಉನ್ನತೀಕರಿಸಿ ನಿಯಮಗಳನುಸಾರ ತಯಾರಿಸುವ ಶಾಲಾವಾರು ವಿಸ್ತ್ರತ ಯೋಜನಾ ವರದಿಯಂತೆ (Detailed Project Report) ಪ್ರತಿ ಶಾಲೆಗೆ ರೂ. 2.00 ಕೋಟಿಗಳಿಂದ ರೂ.4.00 ಕೋಟಿಗಳ ಅನುದಾನ ಒದಗಿಸಲು ಈ ಕೆಳಕಂಡ ಷರತ್ತು ಮತ್ತು ನಿಬಂಧನೆಗಳ ಪಾಲನೆಗೆ ಒಳಪಟ್ಟು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಇವರಿಗೆ ಅನುಮತಿ ನೀಡಿ ಆದೇಶಿಸಿದೆ.





















