GOOD NEWS : ರಾಜ್ಯದಲ್ಲಿ ಇನ್ಮುಂದೆ SSLC, PUCಯಲ್ಲಿ ಶೇ.33 ಅಂಕ ಬಂದ್ರೂ ಪಾಸ್ : ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿ.!

ಬೆಂಗಳೂರು : ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಎಂಬಂತೆ ಪಾಸ್ ಆಗುವ ಕನಿಷ್ಟ ಅಂಕವನ್ನು ಇಳಿಕೆ ಮಾಡಲಾಗಿದೆ. ದ್ವಿತೀಯ ಪಿಯುಸಿಯಲ್ಲಿ ವಿದ್ಯಾರ್ಥಿಗಳು 600 ಕ್ಕೆ 198 ಅಂಕ ಪಡೆದರೆ ಪಾಸ್ ಆಗುತ್ತಾರೆ .ಇನ್ನು ಮುಂದೆ ಉತೀರ್ಣ ಅಂಕವನ್ನು 33ಕ್ಕೆ ನಿಗದಿ ಮಾಡಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ

ಇನ್ನು ಮುಂದೆ ಉತ್ತೀರ್ಣ ಅಂಕವನ್ನು 33ಕ್ಕೆ ನಿಗದಿ ಮಾಡಲಾಗುವುದು . ಕನ್ನಡ ಭಾಷೆಗೆ ನಿಗದಿ ಮಾಡಿರುವ 125 ಅಂಕವನ್ನು 100ಕ್ಕೆ ಇಳಿಸುವ ಬಗ್ಗೆ ಇನ್ನೂ ಯಾವುದೇ ಚರ್ಚೆಯಾಗಿಲ್ಲ. ಸಾರ್ವಜನಿಕರ ಅಭಿಪ್ರಾಯವನ್ನು ತೆಗೆದುಕೊಂಡ ಬಳಿಕ ನಿರ್ಧಾರ ಮಾಡುತ್ತೇವೆ. ಎಲ್ಲ ವಿಷಯಗಳಿಗೆ ನಿಗದಿ ಮಾಡಿರುವ ಉತ್ತೀರ್ಣ ಅಂಕ 35 ಅನ್ನು 33ಕ್ಕೆ ಇಳಿಸುವ ಬಗ್ಗೆ ಚರ್ಚಿಸಲು ಸಾರ್ವಜನಿಕ ವಲಯಕ್ಕೆ ಬಿಟ್ಟಿದ್ದೆವು. ಅದರಲ್ಲಿ ಸುಮಾರು 701 ಮಂದಿ 33 ಅಂಕಗಳ ಪರವಾಗಿಯೂ ಹಾಗೂ 35ರ ಪರವಾಗಿ ಕೇವಲ 8 ಅಭಿಪ್ರಾಯಗಳು ಬಂದವು. ಹೀಗಾಗಿ ಈ ಶೈಕ್ಷಣಿಕ ವರ್ಷದಿಂದ ನಮ್ಮ ರಾಜ್ಯದಲ್ಲಿ ಉತ್ತೀರ್ಣ ಅಂಕವನ್ನು 33ಕ್ಕೆ ನಿಗದಿ ಮಾಡಲಾಗಿದೆ. ಈ ಬಗ್ಗೆ ನಾಳೆ ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ ಎಂದು ತಿಳಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read