ಬೆಂಗಳೂರು : 2025-26ನೇ ಸಾಲಿಗೆ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಅಡಿಯಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ಶಿಕ್ಷಕರ ವೇತನ ವೆಚ್ಚದ ಬಾಬುಗಳಿಗೆ ಅಕ್ಟೋಬರ್-2025 ರಿಂದ ಡಿಸೆಂಬರ್-2025 ಅವಧಿಯ ಮೂರು ತಿಂಗಳ ಅನುದಾನವನ್ನು ಬಿಡುಗಡೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
2025-26ನೇ ಸಾಲಿನ ಆಯವ್ಯಯದಲ್ಲಿ, ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಅಡಿಯಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ಶಿಕ್ಷಕರ ವೇತನ ಬಾಬ್ತಿನಡಿಯಲ್ಲಿ ನಿಗದಿಪಡಿಸಿರುವ ಅನುದಾನದಲ್ಲಿ ಈ ಕೆಳಕಂಡಂತೆ ಅಕ್ಟೋಬರ್-2025 ರಿಂದ ಡಿಸೆಂಬರ್-2025 ರ ಅವಧಿಯ 3 ತಿಂಗಳ ಅನುದಾನ ರೂ.54457.55 ಲಕ್ಷಗಳನ್ನು (ಐವತ್ತ ನಾಲ್ಕು ಸಾವಿರದ ನಾಲ್ಕು ನೂರ ಐವತ್ತೇಳು ಲಕ್ಷದ ಐವತ್ತೈದು ಸಾವಿರ ರೂಪಾಯಿಗಳು ಮಾತ್ರ) ಬಿಡುಗಡೆ ಮಾಡಿ ನಿಯಮಾನುಸಾರ ಭರಿಸಲು, ಸಂಬಂಧಿಸಿದ ಇಲಾಖಾ ಮುಖ್ಯಸ್ಥರಿಗೆ ಈ ಕೆಳಕಂಡ ಷರತ್ತು ಮತ್ತು ನಿಬಂಧನೆಗಳ ಪಾಲನೆಗೆ ಒಳಪಟ್ಟು ಅನುಮತಿ ನೀಡಿ ಆದೇಶಿಸಿದೆ.



