ಬೆಂಗಳೂರು: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಮತ್ತು ರಾಗಿ ಖರೀದಿಸಲು ರೈತರಿಂದ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ.
ಖರೀದಿ ಮತ್ತು ಸಂಗ್ರಹಕ್ಕಾಗಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ರೈತ ಉತ್ಪಾದಕ ಸಂಸ್ಥೆಗಳ ನೆರವು ಪಡೆಯಲು ನಿರ್ಧರಿಸಿದೆ.
ಭತ್ತ ಖರೀದಿಗೆ ಅಕ್ಟೋಬರ್ ಮೊದಲ ವಾರದಿಂದ ನೋಂದಣಿ ಆರಂಭಿಸಲಾಗಿದೆ. ನವೆಂಬರ್ ನಲ್ಲಿ ಖರೀದಿ ಆರಂಭಿಸಲಾಗುವುದು. ಭತ್ತದ ಖರೀದಿಗೆ ಯಾವುದೇ ಮಿತಿ ಇರುವುದಿಲ್ಲ. ಪ್ರತಿ ಎಕರೆಗೆ 25 ಕ್ವಿಂಟಾಲ್ ನಂತೆ ಭತ್ತ ಬೆಳೆದಿರುವ ಹಿಡುವಳಿಯ ಮಿತಿಗೆ ಒಳಪಟ್ಟು ಯಾವುದೇ ಗರಿಷ್ಠ ಮಿತಿ ಇಲ್ಲದೆ ರೈತರು ಹಿಡುವಳಿ ಹಾಗೂ ಬೆಳೆ ದಾಖಲೆಗಳ ದೃಢೀಕರಣದ ಆಧಾರದ ಮೇಲೆ ಲಭ್ಯವಾಗುವ ಭತ್ತ ಖರೀದಿ ಮಾಡಲಾಗುವುದು. ಪ್ರಾಥಮಿಕ ಕೃಷಿ ಕ್ರೆಡಿಟ್ ಸೊಸೈಟಿ ಮತ್ತು ಸ್ವಸಹಾಯ ಸಂಘಗಳನ್ನು ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿತ್ತು. ಆದರೆ ಸ್ವಸಹಾಯ ಸಂಘಗಳು ಒಮ್ಮತ ಸೂಚಿಸದ ಕಾರಣ ಈಗ ರೈತ ಉತ್ಪಾದಕ ಸಂಸ್ಥೆಗಳ ಮೂಲಕ ಖರೀದಿಸಲಾಗುವುದು. ಇದರೊಂದಿಗೆ ಪ್ರಾಥಮಿಕ ಕೃಷಿ ಕ್ರೆಡಿಟ್ ಸೊಸೈಟಿ(ಪ್ಯಾಕ್ಸ್) ನೆರವು ಪಡೆಯಲಾಗುವುದು.