ಟಾಟಾ ಮೋಟಾರ್ಸ್ ದೀಪಾವಳಿ ಹಬ್ಬಕ್ಕೆ ಕಾರ್ ಗಳ ಮೇಲೆ 1.90 ಲಕ್ಷ ರೂ.ವರೆಗೆ ರಿಯಾಯಿತಿ ಘೋಷಿಸಿದೆ. ಜಿಎಸ್ಟಿ ಕಡಿತದಿಂದ ಕಾರ್ ಗಳ ಬೆಲೆ ಇಳಿಕೆಯಾಗಿದ್ದು, ಇದರೊಂದಿಗೆ ದೀಪಾವಳಿ ಡಿಸ್ಕೌಂಟ್ ಆಫರ್ ಕೂಡ ನೀಡಲಾಗಿದೆ. ಅಕ್ಟೋಬರ್ 21 ರವರೆಗೆ ಸೀಮಿತ ಅವಧಿಗೆ ಆಫರ್ ಲಭ್ಯವಿದೆ.
ಟಾಟಾ ಆಲ್ಟ್ರೋಜ್ ಕಾರ್ ಮೇಲೆ ಒಂದು ಲಕ್ಷ ರೂ. ಡಿಸ್ಕೌಂಟ್ ನೀಡಲಾಗಿದೆ. ಅಲ್ಟ್ರೋಜರ್ ರೇಸರ್ ವೇರಿಯಂಟ್ ಮಾಡೆಲ್ ಮೇಲೆ 1.35 ಲಕ್ಷ ರೂ. ವರೆಗೆ ರಿಯಾಯಿತಿ ನೀಡಲಾಗಿದೆ.
ಟಾಟಾ ನೆಕ್ಸಾನ್ ಪೆಟ್ರೋಲ್, ಡೀಸೆಲ್, ಸಿ.ಎನ್.ಜಿ. ಕಾರ್ ಗಳ ಮೇಲೆ 35,000 ರೂ. ಕನ್ಸ್ಯೂಮರ್ ಡಿಸ್ಕೌಂಟ್ ನೀಡಲಾಗಿದೆ. 10,000 ಎಕ್ಸ್ಚೇಂಜ್ ಬೋನಸ್ ಸೇರಿ ಒಟ್ಟು 45,000 ರೂ. ರಿಯಾಯಿತಿ ನೀಡಲಾಗಿದೆ. ಟಾಟಾ ಪಂಚ್ ಸಿ.ಎನ್.ಜಿ. ಪೆಟ್ರೋಲ್ ವೇರಿಯಂಟ್ ಕಾರ್ ಗಳ ಮೇಲೆ 25000 ರೂ. ರಿಯಾಯಿತಿ ನೀಡಲಾಗಿದೆ.
ಟಾಟಾ ಹ್ಯಾರಿಯರ್, ಸಫಾರಿ ಕಾರ್ ಗಳ ಮೇಲೆ ಕನ್ಸ್ಯೂಮರ್ ಆಫರ್ 50,000 ರೂ. ಎಕ್ಸ್ಚೇಂಜ್ 25 ಸಾವಿರ ಸೇರಿ 75,000 ರೂ. ರಿಯಾಯಿತಿ ನೀಡಲಾಗಿದೆ.
ಟಾಟಾ ಕರ್ವ್ ಎಲೆಕ್ಟ್ರಿಕ್ ಕಾರ್ ಗಳ ಮೇಲೆ 1.90 ಲಕ್ಷ ರೂ. ರಿಯಾಯಿತಿ ನೀಡಲಾಗಿದೆ. ಇದೇ ರೀತಿ ವಿವಿಧ ಕಾರ್ ಗಳ ಮೇಲೆ ರಿಯಾಯಿತಿ ನೀಡಲಾಗಿದೆ. ರಾಜ್ಯದಿಂದ ರಾಜ್ಯಕ್ಕೆ ದರದಲ್ಲಿ ವ್ಯತ್ಯಾಸವಿರುತ್ತದೆ ಎನ್ನಲಾಗಿದೆ.