ಆರ್.ಎಸ್.ಎಸ್ ಬ್ಯಾನ್ ಅಂತ ನಾನು ಹೇಳಿಲ್ಲ; ಸರ್ಕಾರಿ ಶಾಲೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆ ಬೇಡ ಎಂದಿದ್ದೇನೆ: ಪ್ರಿಯಾಂಕ್ ಖರ್ಗೆ ಸ್ಪಷ್ಟನೆ

ಬೆಂಗಳೂರು: ಆರ್.ಎಸ್.ಎಸ್ ಬ್ಯಾನ್ ಮಾಡಬೇಕು ಅಂತಾ ನಾನು ಹೇಳಿಲ್ಲ. ಸರ್ಕಾರಿ ಶಾಲೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಆರ್.ಎಸ್.ಎಸ್ ಚಟುವಟಿಕೆ ಬೇಡ ಎಂದು ಹೇಳಿದ್ದೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಪ್ರಿಯಾಂಕ್ ಖರ್ಗೆ, ನಾನೆಲ್ಲಿ ಆರ್.ಎಸ್.ಎಸ್ ನಿಷೇಧ ಮಾಡಬೇಕು ಎಂದು ಹೇಳಿದ್ದೇನೆ? ಸರ್ಕಾರಿ ಶಾಲೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಸಂಘದ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದಿದ್ದೇನೆ ಎಂದರು. ಆರ್.ಎಸ್.ಎಸ್ ಸಂಘಟನೆಯನ್ನು ಈವರೆಗೆ ನೋಮ್ದಣಿ ಮಾಡಿಲ್ಲ. ಸಂಘ ರಿಜಿಸ್ಟರ್ ಆಗಿದ್ದರೆ ಕಾಪಿ ಕೊಡಲಿ. ಅವರ ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಸಲು 55 ವರ್ಷ ಬೇಕಾಯಿತು ಎಂದು ಹೇಳಿದರು.

ಬಿಜೆಪಿ ನಾಯಕರು ಯಾಕೆ ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಗಣೇಶ ವೇಷ ಹಾಕಿಸಿ ಕೈಯಲ್ಲಿ ದೊಣ್ಣೆ ಹಿಡಿಸುವುದಿಲ್ಲ? ಬಡವರ ಮಕ್ಕಳನ್ನು ಆರ್.ಎಸ್.ಎಸ್ ಗೆ ಸೆಳೆದು ಬಡವರ ಮಕ್ಕಳಿಗೆ ಗಣೇವೇಶ ತೊಡಿಸಿ ಪ್ರಚೋದನಕಾರಿ ಭಾಷಣ ಮಾಡುವುದು ಯಾಕೆ? ಈ ಬಗ್ಗೆ ಮೊದಲು ಬಿಜೆಪಿ ನಾಯಕರು, ಆರ್.ಎಸ್.ಎಸ್ ನವರು ಉತ್ತರ ನೀಡಲಿ ಎಂದು ಹೇಳಿದರು.

ಇನ್ನು ಶಾಸಕ ಮುನಿರತ್ನ ಗಣವೇಷ ಹಾಕಿಕೊಂಡು, ಗಾಂಧೀಜಿ ಫೋಟೋ ಹಿಡಿದುಕೊಂಡು ಪ್ರತಿಭಟನೆ ನಡೆಸಿದ್ದು ಹಾಸ್ಯಾಸ್ಪದ. ಅವರಿಗೆ ಆರ್.ಎಸ್.ಎಸ್ ಇತಿಹಾಸ ಗೊತ್ತಿಲ್ಲ ಅನ್ನಿಸುತ್ತೆ ಎಂದು ವ್ಯಂಗ್ಯವಾಡಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read