SHOCKING: ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಮರ್ಮಾಂಗಕ್ಕೆ ಸಿಗರೇಟ್ ನಿಂದ ಸುಟ್ಟು ಚಿತ್ರ ಹಿಂಸೆ

ಬೆಂಗಳೂರು: ವ್ಯಕ್ತಿಯೊಬ್ಬನಿಗೆ ನೀಡಿದ್ದ ಹಣ ವಾಪಸ್ ಕೇಳಿದ್ದಕ್ಕೆ ಸಾಲ ನೀಡಿದವನನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಚಿತ್ರ ಹಿಂಸೆ ನೀಡಿದ ಘಟನೆ ಬೆಂಗಳೂರಿನ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಗಾಯ್ ರಾಜ್ ಅಪಹರಣಕ್ಕೊಳಗಾಗಿದ್ದ ವ್ಯಕ್ತಿ. ಆನಂದಕುಮಾರ್, ಆಶೀಶ್ ಮತ್ತು ಐಶ್ವರ್ಯಾ ಸೇರಿ ಹಲವರ ವಿರುದ್ಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತನ್ನ ತಂದೆಗೆ ಕಿಡ್ನಿ ವೈಫಲ್ಯ ಎಂದು ಹೇಳಿ ಸಗಾಯ್ ರಾಜ್ ನಿಂದ ಆನಂದಕುಮಾರ್ ಹಣ ಪಡೆದುಕೊಂಡಿದ್ದ. ಆತನ ಪುತ್ರಿ ಐಶ್ವರ್ಯಾ ಖಾತೆಗೆ ಹಂತ ಹಂತವಾಗಿ 3 ಲಕ್ಷ ರೂಪಾಯಿ ಹಣವನ್ನು ಸಗಾಯ್ ರಾಜ್ ವರ್ಗಾಯಿಸಿದ್ದರು. ಮನೆ ಮಾರಾಟ ಮಾಡಿ ಹಣ ಕೊಡುತ್ತೇನೆ ಎಂದು ಆನಂದಕುಮಾರ್ ಹೇಳಿದಾಗ ತನಗೇ ಮನೆ ಮಾರಾಟ ಮಾಡುವಂತೆ ಸಗಾಯ್ ರಾಜ್ ತಿಳಿಸಿದ್ದಾರೆ. ಅಗ್ರಿಮೆಂಟ್ ಗೆ ಮೊದಲು ಒಂದು ಕೋಟಿ ರೂಪಾಯಿ ನೀಡಿದ್ದು, ಉಳಿದ ಹಣವನ್ನು ನಂತರ ಕೊಡುವುದಾಗಿ ಮಾತುಕತೆಯಾಗಿದೆ. ಸಗಾಯ್ ರಾಜ್ ಒಂದು ಕೋಟಿ ರೂಪಾಯಿಗಳನ್ನು ಆನಂದಕುಮಾರ್ ಗೆ ನೀಡಿದ್ದರು. ಮನೆ ನೋಂದಣಿ ಮಾಡಿ ಕೊಟ್ಟಿರಲಿಲ್ಲ. ಹೀಗಾಗಿ ಹಣ ವಾಪಸ್ ಕೊಡುವಂತೆ ಕೇಳಿದ್ದಾರೆ.

ಇದರಿಂದ ಆಕ್ರೋಶಗೊಂಡ ಆನಂದಕುಮಾರ್ ಹಾಗೂ ಇತರರು ಸಗಾಯ್ ರಾಜ್ ಕಾರ್ ನಲ್ಲಿ ಹೋಗುವಾಗ ಅಪಹರಿಸಿದ್ದಾರೆ. ನಿರ್ಜನ ಪ್ರದೇಶಕ್ಕೆ ಎಳೆದೊದ್ದು ಕೈ ಕಾಲು ಕಟ್ಟಿ ಹಾಕಿ ಮರ್ಮಾಂಗಕ್ಕೆ, ತೊಡೆಗೆ ಸಿಗರೇಟ್ ನಿಂದ ಸುಟ್ಟು ಚಿತ್ರಹಿಂಸೆ ನೀಡಿದ್ದಾರೆ. ಮರ್ಮಾಂಗಕ್ಕೆ ಇಂಜೆಕ್ಷನ್ ನಿಂದ ಚುಚ್ಚಿ ವಿಕೃತಿ ಮೆರೆದಿದ್ದು, ಕೃತ್ಯದ ವಿಡಿಯೋ ಮಾಡಿ ಬೆದರಿಕೆ ಹಾಕಿದ್ದಾರೆ. ಕಾರ್ ನಲ್ಲಿ ರಾತ್ರಿಯೆಲ್ಲ ಸುತ್ತಾಡಿಸಿ ಚಿತ್ರ ಹಿಂಸೆ ನೀಡಿದ್ದಾರೆ. ಬೆಳಗಿನ ಜಾವ ಸಗಾಯ್ ರಾಜ್ ಕಾಪಾಡಿ ಎಂದು ಕೂಗಿಕೊಂಡಿದ್ದು ಸಾರ್ವಜನಿಕರ ನೆರವೇನಿಂದ ಪಾರಾಗಿ ಬಂದು ಪೊಲೀಸರಿಗೆ ದೂರು ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read