BIG NEWS: ಸ್ಥಳೀಯ ಶಾಸಕರಿಗೆ ತಾಳ್ಮೆ ಇರಲಿಲ್ಲ; ಗಲಾಟೆ ಮಾಡಲೆಂದೇ ಬಂದಿದ್ದರು: ಮುನಿರತ್ನ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್ ಕಿಡಿ

ಬೆಂಗಳೂರು: ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ನಡಿಗೆ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಮುನಿರತ್ನ ಹೈಡ್ರಾಮಾ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಸ್ಥಳೀಯ ಶಾಸಕರಿಗೆ ತಾಳ್ಮೆ ಇರಲಿಲ್ಲ ಎಂದು ಕಿಡಿಕಾರಿದ್ದಾರೆ.

ಬೆಂಗಳೂರಿನ ಜೆ.ಪಿ ಪಾರ್ಕ್ ನಲ್ಲಿ ಆಯೋಜಿಸಿದ್ದ ನಡುಗೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಸ್ಥಳೀಯ ಶಾಸಕರಿಗೆ ತಾಳ್ಮೆ ಇರಲಿಲ್ಲ. ಗಲಾಟೆ ಮಾಡಲೆಂದೇ ಅವರು ಬಂದಿದ್ದರು. ವೇದಿಕೆಗೆ ಆಹ್ವಾನಿಸಿದರೂ ಅವಮಾನ ಮಾಡಿ ಹೋಗಿದ್ದಾರೆ. ಈ ಸಭೆಗೆ ಅವಮಾನ ಮಾಡಿದ್ದಾರೆ. ಇಂತಹವರನ್ನೆಲ್ಲ ಶಾಸಕರನ್ನಾಗಿ ಆಯ್ಕೆ ಮಾಡಿರುವುದಕ್ಕೆ ಬೇಸರವಾಗುತ್ತಿದೆ ಎಂದರು.

ಇಂತಹ ಜನಪ್ರತಿನಿಧಿಗಳು ಬೇಕಾ? ಇದರ ಬಗ್ಗೆ ಮುಂದೆ ನೀವೇ ನಿರ್ಧಾರಗಳನ್ನು ಮಾಡಬೇಕು ಎಂದು ಹೇಳಿದರು. ಇನ್ನು ರಸ್ತೆ ಗುಂಡಿ ಬಗ್ಗೆಯಾಗಲಿ, ಕಸದ ಸಮಸ್ಯೆಬಗ್ಗೆಯಾಗಲಿ ಫೋಟೋ ತೆಗೆದು ದೂರು ನೀಡುವಂತೆ ಸೂಚಿಸಿದ್ದೇವೆ. ಯಾರಿಗೆ ಎಲ್ಲೇ ರಸ್ತೆ ಗುಂಡಿ ಕಂಡುಬಂದರು ಅದರ ಒಂದು ಫೋಟೋ ತೆಗೆದು ಕಳುಹಿಸುವಂತೆ ವ್ಯವಸ್ಥೆ ಮಾಡಿದ್ದೇವೆ. ಈ ವ್ಯವಸ್ಥೆ ಈವರೆಗೂ ಯಾವುದೇ ಸರ್ಕಾರ ಎಲ್ಲಿಯೂ ಮಾಡಿರಲಿಲ್ಲ. ಅದನ್ನು ನಾವು ಜಾರಿಗೆ ತಂದಿದ್ದೇವೆ. ರಸ್ತೆ ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read