ಮಂಗಳೂರು: ಕಣಜದ ಹುಳಗಳ ದಾಳಿಯಿಂದ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಪಡ್ನೂರು ಗ್ರಾಮದ ಸೇಡಿಯಾಪು ಬಳಿ ನಡೆದಿದೆ.
ಶಾಲೆಯಿಂದ ಮನೆಗೆ ತೆರಳುತ್ತಿದ್ದ ವೇಳೆ ವಿದ್ಯಾರ್ಥಿಗಳಿಬ್ಬರ ಮೇಲೆ ಕಣಜದ ಹುಳಗಳ ಹಿಂಡು ದಾಳಿ ಮಾಡಿದೆ. ಗಂಭೀರವಾಗಿ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿ ದಿಶಾ(7) ಮೃತಪಟ್ಟಿದ್ದಾಳೆ. ಸೇಡಿಯಾಪು ಕೂಟೇಲು ಗ್ರಾಮದ ಕಿರಣ್ ಅವರ ಪುತ್ರಿ ದಿಶಾ ಶುಕ್ರವಾರ ಸಂಜೆ ಕಣಜದ ಹುಳಗಳ ಗಾಯಗೊಂಡಿದ್ದು, ಶನಿವಾರ ಮಧ್ಯಾಹ್ನ ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಅಸ್ವಸ್ಥಗೊಂಡ ಮತ್ತೊಬ್ಬ ವಿದ್ಯಾರ್ಥಿ ಪ್ರತ್ಯೂಶ್(10) ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಕ್ಕಳ ರಕ್ಷಣೆಗೆ ಧಾವಿಸಿದ ನಾರಾಯಣ ಎಂಬುವರ ಮೇಲೆಯೂ ಕಣಜದ ಹುಳಗಳ ಹಿಂಡು ದಾಳಿ ಮಾಡಿದ್ದು, ಅವರು ಚೇತರಿಸಿಕೊಂಡಿದ್ದಾರೆ.