ಹಾಸನ: ಬ್ಯೂಟಿ ಪಾರ್ಲರ್ ಗೆ ನುಗ್ಗಿ ಮಹಿಳೆಯ ಮೇಲೆ ಮಹಿಳಾ ಗ್ಯಾಂಗ್ ನಿಂದಲೇ ಹಲ್ಲೆ ನಡೆದಿರುವ ಘಟನೆ ಹಾಸನದ ಚನ್ನಪಟ್ಟಣ ಬಡಾವಣೆಯಲ್ಲಿ ನಡೆದಿದೆ.
ಹಲ್ಲೆಗೊಳಗಾದ ಮಹಿಳೆ ಶೀಲಾ ಎಸ್.ಆರ್ ಎಂದು ಗುರುತಿಸಲಾಗಿದೆ. ಅರ್ಪಿತಾ, ಮೋನಿಕಾ, ಸುಚಿತ್ರಾ, ಪಂಕಜ, ತಿಕಲ್ ಎಂಬುವವರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕೆ.ಆರ್.ಎಸ್ ಪಕ್ಷದ ಮುಖಂಡ ರಮೇಶ್ ಪತ್ನಿ ಅರ್ಪಿತಾ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದು, ಅದೇ ಪಾರ್ಲರ್ ನಲ್ಲಿ ಶೀಲಾ ಕೆಲಸ ಮಾಡುತ್ತಿದ್ದರು. ಶೀಲಾ ಮೇಲೆ ಅರ್ಪಿತಾ ಕಳ್ಳತನದ ಆರೋಪ ಮಾಡಿದ್ದರು. ಇದರಿಂದ ನೊಂದ ಶೀಲಾ ಪೊಲೀಸ್ ಠಾನೆಯಲ್ಲಿ ದೂರು ದಾಖಲಿಸಿದ್ದರು. ಇದರಿಂದ ಅರ್ಪಿತಾ ಕೋಪಗೊಂಡಿದ್ದರು.
ಶೀಲಾ ಎಲ್ಲಿಯೇ ಕೆಲಸಕ್ಕೆ ಸೇರಿದ್ದರೂ ಅಲ್ಲಿ ಹೋಗಿ ಶೀಲಾ ವಿರುದ್ಧ ಅಪಪ್ರಚಾರ ಮಾಡಿ ಕಳ್ಳತನ ಮಾಡಿದವರು ಎಂದು ಅರ್ಪಿತಾ ಹೇಳುತ್ತಿದ್ದಳು. ಇತ್ತೀಚೆಗೆ ಶೀಲಾ, ಚನ್ನಪಟ್ಟಣದ ಪಾರ್ಲರ್ ವೊಂದರಲ್ಲಿ ಕೆಲಸಕ್ಕ್ಕೆ ಸೇರಿದ್ದರು. ಅಲ್ಲಿಗೂ ಬಂದಿದ್ದ ಅರ್ಪಿತಾ ಪಾರ್ಲರ್ ಮಾಲೀಕರಿಗೆ ಶೀಲಾ ವಿರುದ್ಧ ದೂರು ನೀಡಿ ಆರೋಪ ಮಾಡಿದ್ದರು. ಇದರಿಂದ ಶೀಲಾ ಹಾಗೂ ಅರ್ಪಿತಾ ನಡುವೆ ಗಲಾಟೆಯಾಗಿದೆ. ಇದೇ ವಿಚಾರವಾಗಿ ಶೀಲಾ ಕೆಲಸ ಮಾಡುತ್ತಿದ್ದ ಪಾರ್ಲರ್ ಗೆ ನಿಗ್ಗಿದ ಅರ್ಪಿತಾ ಹಾಗೂ ಗ್ಯಾಂಗ್ ಶೀಲಾ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಸಿಸಿಟಿವಿ ಕ್ಯಾಮರಾದಲ್ಲಿಯೂ ಘಟನೆ ಸೆರೆಯಾಗಿದ್ದು, ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.