ದಾವಣಗೆರೆ: ದೇಶದ ವಿವಿಧ ಬ್ಯಾಂಕ್ ಗಳ ಖಾತೆಯಲ್ಲಿ ಹಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆಯಲ್ಲಿ ವಂಚಕನನ್ನು ಬಂಧಿಸಲಾಗಿದೆ.
ಸೈಬರ್ ಕ್ರೈಂ ಪೋಲೀಸರು ಬರೋಬ್ಬರಿ 150 ಕೋಟಿ ರೂಪಾಯಿಯನ್ನು ವಂಚಿಸಿದ್ದ ಆರೋಪಿ ಬಂಧಿಸಿದ್ದಾರೆ. ಆರೋಪಿ ಸೈಯದ್ ಅರ್ಫಾತ್ ನನ್ನು ಸೈಬರ್ ಪೋಲೀಸರು ಬಂಧಿಸಿದ್ದಾರೆ. ಸಿಸಿಟಿವಿ ಕೆಲಸ ಮಾಡುತ್ತಿದ್ದ ಆರೋಪಿಯ ಅರ್ಫಾತ್ ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಶಾಂತಿನಗರ ನಿವಾಸಿಯಾಗಿದ್ದಾನೆ. ತಲೆಮರೆಸಿಕೊಂಡ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಆರೋಪಿ ಖಾತೆಯಲ್ಲಿ 150 ಕೋಟಿ ಹಣ ಡೆಪಾಸಿಟ್ ಆಗಿದೆ. ಆರೋಪಿಗಳು 132 ಕೋಟಿ ರೂಪಾಯಿ ಹಣ ವಿತ್ ಡ್ರಾ ಮಾಡಿದ್ದಾರೆ. ಖಾತೆಯಲ್ಲಿದ್ದ 18 ಕೋಟಿ ರೂ.ಗಳನ್ನು ಪೊಲೀಸರು ಫ್ರೀಜ್ ಮಾಡಿಸಿದ್ದಾರೆ. ದಾವಣಗೆರೆ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.