ಬೆಂಗಳೂರು: ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಒಳ್ಳೆಯದೇ. ಇದು ಬೆಂಗಳೂರಿನ ಪ್ರಗತಿಯ ದಿಕ್ಸೂಚಿ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬೆಂಗಳೂರಿನ ಸನಸಂಖ್ಯೆ ಸುಮಾರು 75.5ಪ್ರತಿಶತ ಜನರು ಕೆಲಸ ಮಾಡುವ ಜನಸಂಖ್ಯೆಯ ಭಾಗವಾಗಿದ್ದಾರೆ. ನಾವು ಜಾಗತಿಕವಾಗಿ ನಾಲ್ಕನೇ ಸ್ಥಾನದಲ್ಲಿದ್ದೇವೆ. ಹಾಗೇ ನೋಡಿದರೆ ಟ್ರಾಫಿಕ್ ಸಮಸ್ಯೆ ಒಂದು ಲೆಕ್ಕದಲ್ಲಿ ಒಳ್ಳೆಯದು. ಇದು ನಾವು ಬೆಳೆಯುತ್ತಿದ್ದೇವೆ ಎಂಬುದನ್ನು ತೋರಿಸುತ್ತದೆ. ಆದಾಗ್ಯೂ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.
ಬೆಂಗಳೂರಿನಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುತ್ತಿರುವುದರಿಂದ ಜನರು ವಲಸೆ ಬರುವುದು ಹೆಚ್ಚು. ಬೆಂಗಳೂರಿನಲ್ಲಿ ಈಗ ಸುಮಾರು 82 ಲಕ್ಷ ದ್ವಿಚಕ್ರವಾಹನಗಳು ಮತ್ತು 25 ಲಕ್ಷ ನಾಲ್ಕು ಚಕ್ರವಾಹನಗಳು ಸೇರಿ ಒಟ್ಟು 1.2 ಕೋಟಿ ನೋಂದಾಯಿತ ವಾಹನಗಳಿವೆ ಎಂದರು.