ಹಾವೇರಿ: ವಿಮೆ ಹಣಕ್ಕಾಗಿ ಅಳಿಯನನ್ನೇ ಮಾವ ಹಾಗೂ ಆತನ ಗ್ಯಾಂಗ್ ಹತ್ಯೆ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದಲ್ಲಿ ನಡೆದಿದೆ.
ಬಸವರಾಜ್ ಪುಟ್ಟಪ್ಪನವರ್ (38) ಕೊಲೆಯಾದ ಅಳಿಯ. ಮಾವ ಸಿದ್ದನಗೌಡ ಹಾಗೂ ರಾಘವೇಂದ್ರ ಮಾಳಗೊಂಡರ, ಪ್ರವೀಣ್, ಲೋಕೇಶ್ ಹಲಗೇರಿ ಸೇರಿ ಬಸವರಾಜ್ ನನ್ನು ಹತ್ಯೆ ಮಾಡಿದ್ದಾರೆ. ಬಸವರಾಜ್ ಹೆಸರಲ್ಲಿದ್ದ ವಿಮೆ ಹಣಕ್ಕಾಗಿ ಈ ಕೃತ್ಯವೆಸಗಲಾಗಿದೆ.
ಬ್ಸವರಾಜ್ ತಂದೆ-ತಾಯಿ ಹಾಗೂ ಆತನ ಸಹೋದರ ಈ ಹಿಂದೆ ಸಾವನ್ನಪ್ಪಿದ್ದಾರು. ಬಸವರಾಜ್ ಒಂಟಿಯಾಗಿ ಜೀವನ ಸಾಗಿಸುತ್ತಿದ್ದ. ಕುಡುತದ ಚಟಕ್ಕೆ ಬಿದ್ದಿದ್ದ. ಬಸವರಾಜ್ ಹೆಸರಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಮನೆ, ಆಸ್ತಿ, ಹಣ ಕೂಡ ಇತ್ತು. ಬಸವರಾಜ್ ನ ಕುಡಿತದ ವ್ಯಸನವನ್ನೇ ಬಂಡವಾಳ ಮಾಡಿಕೊಂಡ ಮಾವ ಸಿದ್ದನಗೌಡ, ಆತನ 8 ಎಕರೆ ಜಮೀನು ಹಾಗೂ ಮನೆ ಮೇಲೆ ಕಣ್ಣು ಹಾಕಿದ್ದ. ಬಸವರಾಜ್ ಸೋದರ ಸಂಬಂಧಿ ಆತ ಯಾವುದೇ ಆಸ್ತಿ ಮಾರಾಟ ಮಾಡದಂತೆ ಸ್ಟೇ ತಂದಿದ್ದರು. ಈ ವಿಚಾರ ತಿಳಿಸಿದ ಸಿದ್ದನಗೌಡ ಇನ್ನಷ್ಟು ಕೋಪಗೊಂಡಿದ್ದ.
ರಾಘವೇಂದ್ರ ಎಂಬಾತನಿಗೆ 50 ಸಾವಿರ ಹಣಕೊಟ್ಟು ಸಿದ್ದನಗೌಡ ಹೆಸರಲ್ಲಿ ಅಪಘಾತದ ವಿಮೆ ಮಾಡಲು ಹೇಳಿದ್ದ. ಬಸವರಾಜ್ ಹೆಸರಲ್ಲಿದ್ದ ಆಸ್ತಿ ಸಿಗಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ಆತನ ಹೆಸರಲ್ಲಿದ್ದ ಇನ್ಶೂರೆನ್ಸ್ ಹಣಕ್ಕಾಗಿ ಪ್ಲಾನ್ ಮಾಡಿದೆ. ಬಸವರಾಜ್ ನನ್ನು ಊರಿಂದ ಹೊರಕರೆದುಕೊಂಡು ಹೋಗಿ ಕಂಠಪೂರ್ತಿ ಕುಡಿಸಿ ಬೈಕ್ ನಲ್ಲಿ ಕಳುಹಿಸಿದ್ದಾರೆ. ಬಳಿಕ ಕಾರು ಡಿಕ್ಕಿಹೊಡೆಸಿ ಕೊಲೆಗೈದು ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ ಎಂದು ಬಿಂಬಿಸಿದ್ದಾರೆ.
ಘಟನಾ ಸ್ಥಳಕ್ಕಾಗಮಿಸಿದ ಬಸವರಾಜ್ ಕುಟುಂಬದ ಕೆಲ ಸದಸ್ಯರು ಇದು ಅಪಘಾತವಲ್ಲ ಕೊಲೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಸೋದರ ಮಾವನೇ ಅಳಿಯನ ಆಸ್ತಿ, ಹಣಕ್ಕಾಗಿ ಕೊಲೆ ಮಾಡಿರುವುದು ಬಯಲಾಗಿದೆ. ಪ್ರಕರಣ ಸಂಬಂಧ ಮಾವ ಸಿದ್ದನಗೌಡ ಸೇರಿ ನಾಲ್ವರನ್ನು ಬಂಧಿಸಲಾಗಿದೆ.