ಫಿಲಿಪೈನ್ಸ್ನ ಮಿಂಡಾನಾವೊದಲ್ಲಿ ರಿಕ್ಟರ್ ಮಾಪಕದಲ್ಲಿ 7.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ.
ಭೂಕಂಪದ ನಂತರ ಕಂಪನಗಳ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಭೂಕಂಪವು 62 ಕಿಮೀ (38.53 ಮೈಲುಗಳು) ಆಳದಲ್ಲಿ ಸಂಭವಿಸಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರ (EMSC) ತಿಳಿಸಿದೆ.
ಮಿಂಡಾನಾವೊ ಪ್ರದೇಶದ ದಾವೊ ಓರಿಯಂಟಲ್ನಲ್ಲಿರುವ ಮನಾಯ್ ಪಟ್ಟಣದ ನೀರಿನಲ್ಲಿ ಸಂಭವಿಸಿದ ಪ್ರಬಲ ಭೂಕಂಪದ ನಂತರ ಹಾನಿ ಮತ್ತು ನಂತರದ ಕಂಪನಗಳ ಬಗ್ಗೆ ಫಿವೊಲ್ಕ್ಸ್ ಸಂಸ್ಥೆ ಎಚ್ಚರಿಸಿದೆ. ಭೂಕಂಪವು 10 ಕಿಮೀ (6 ಮೈಲಿ) ಆಳದಲ್ಲಿ ಸಂಭವಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಮಧ್ಯ ಮತ್ತು ದಕ್ಷಿಣ ಫಿಲಿಪೈನ್ಸ್ನ ಕರಾವಳಿ ಪಟ್ಟಣಗಳಲ್ಲಿ ವಾಸಿಸುವ ಜನರು ತಕ್ಷಣವೇ ಎತ್ತರದ ಪ್ರದೇಶಗಳಿಗೆ ಸ್ಥಳಾಂತರಿಸಲು ಅಥವಾ ಒಳನಾಡಿಗೆ ತೆರಳಲು ಸೂಚಿಸಲಾಗಿದೆ. ಭೂಕಂಪದ ಕೇಂದ್ರಬಿಂದುದಿಂದ 300 ಕಿಮೀ (186 ಮೈಲುಗಳು) ಒಳಗೆ ಇರುವ ಕರಾವಳಿಗಳಿಗೆ ಅಪಾಯಕಾರಿ ಸುನಾಮಿ ಅಲೆಗಳು ಸಂಭವಿಸುವ ಸಾಧ್ಯತೆಯಿದೆ ಎಂದು ಅಮೆರಿಕದ ಸುನಾಮಿ ಎಚ್ಚರಿಕೆ ವ್ಯವಸ್ಥೆಯು ಸುನಾಮಿ ಎಚ್ಚರಿಕೆ ನೀಡಿದೆ.
1. A powerful M7.4 earthquake struck Mindanao, Philippines, near Mati and Manay.
— GeoTechWar (@geotechwar) October 10, 2025
Strong shaking in several cities. Tsunami warning issued. #lindol #sismo #deprem pic.twitter.com/K0KTZvrbFe
Patients and staff seen evacuating the Tagum City Davao Regional Medical Center in the Philippines amid intense shaking caused by magnitude 7.6 earthquake. pic.twitter.com/melwzIQdCy
— Noteworthy News (@newsnoteworthy) October 10, 2025
