ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ಮೈಲಾಪುರ ಬಳಿ ಕೃಷಿ ಹೊಂಡದಲ್ಲಿ ಬಿದ್ದು ಅಕ್ಕ, ತಮ್ಮ ಸಾವನ್ನಪ್ಪಿದ್ದಾರೆ. ಮೂಕಣ್ಣನವರ ಮಕ್ಕಳಾದ ಮಹಾಂಕಾಳಿ(12), ಶಿವರಾಜ್(9) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಜಮೀನಿನಲ್ಲಿ ರೈತ ಮೂಕಣ್ಣನವರ ಕೆಲಸ ಮಾಡುತ್ತಿದ್ದಾಗ ಮಕ್ಕಳು ಆಟವಾಡುತ್ತಿದ್ದರು. ಕೃಷಿ ಹೊಂಡದ ಬಳಿ ಆಟವಾಡುತ್ತ ತೆರಳಿದ್ದು, ಕಾಲು ಜಾರಿ ಕೃಷಿಹೊಂಡಕ್ಕೆ ಬಿದ್ದು ಮೃದುಪಟ್ಟಿದ್ದಾರೆ. ಕೃಷಿ ಹೊಂಡದಿಂದ ಇಬ್ಬರು ಮಕ್ಕಳ ಮೃತದೇಹಗಳನ್ನು ಗ್ರಾಮಸ್ಥರು ಹೊರಗೆ ತೆಗೆದಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತೆಕ್ಕಲಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.