ತುಮಕೂರು: ಬಿಹಾರ ಚುನಾವಣೆ ಮುಗಿಯುವವರೆಗೂ ಸುಮ್ಮನಿದ್ದುಬಿಡಿ. ಅಲ್ಲಿಯವರೆಗೂ ಚರ್ಚೆ ಬೇಡ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡ್ದ ರಾಜಣ್ಣ, ಸಚಿವ ಸಂಪುಟ ವಿಸ್ತರಣೆ ವಿಚಾರ ಹಾಗೂ ಮತ್ತೆ ಸಚಿವರಾಗುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬಿಹಾರ ಚುನಾವಣೆವರೆಗೂ ಕಾದುನೋಡಿ. ಎಂದಷ್ಟೇ ಹೇಳಿದ್ದಾರೆ.
ಬಿಹಾರ ಚುನಾವಣೆ ಮುಗಿಯುವವರೆಗೂ ಚರ್ಚೆ ಬೇಡ. ಅಲ್ಲಿಯವರೆಗೂ ಕಾದುನೋಡಿ. ಸಿಎಂ ಸಿದ್ದರಾಮಯ್ಯ ಬಗ್ಗೆ ನನಗೆ ವಿಶ್ವಾಸವಿದೆ ಎಂದರು. ಮಂತ್ರಿ ಸ್ಥಾನ ಕೊಡಿ ಎಂದು ನಾನು ಕೇಳಿಲ್ಲ. 2018ರಲ್ಲಿ ನಾನು ಸೋತಾಗ ಸಿದ್ದರಾಮಯ್ಯ ಹೇಳಿದ್ದರು ನೀನು ಗೆದ್ದರೆ ಮಂತ್ರಿಯಾಗುತ್ತಿದೆ, ನಿನ್ನ ಬದಲು ತುಕಾರಾಂ ಅವರನ್ನು ಮಂತ್ರಿ ಮಾಡಿದ್ದೇನೆ ಎಂದು ಹೇಳಿದ್ದರು. ಈ ಬಾರಿ ಅವರೇ ಕರೆದು ನನಗೆ ಮಂತ್ರಿ ಸ್ಥಾನ ಕೊಟ್ಟಿದ್ದರು ಎಂದರು.
ನಾನಾಗ್ಯೇ ಸಚಿವ ಸ್ಥಾನಬೇಕು ಎಂದು ಈ ಹಿಂದೆಯೂ ಕೇಳಿರಲಿಲ್ಲ. ಈಗಲೂ ಕೇಳಲ್ಲ. ಎಲ್ಲವೂ ಬಿಹಾರ ಚುನಾವಣೆ ಮುಗಿದ ಬಳಿಕ ಗೊತ್ತಾಗುತ್ತದೆ ಎಂದರು.