ಬೆಂಗಳೂರು : ಬೆಂಗಳೂರಲ್ಲಿ ಜಾತಿ ಗಣತಿ ಸಮೀಕ್ಷೆಗೆ ಬಂದಿದ್ದ ಶಿಕ್ಷಕಿಯನ್ನ ಕೂಡಿಹಾಕಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸಂದೀಪ್ ಎಂಬಾತ ತಮ್ಮ ಮನೆಗೆ ಗಣತಿ ಮಾಡಲು ಬಂದಿದ್ದ ಶಿಕ್ಷಕರನ್ನು ಪ್ರಶ್ನಿಸಿ ಕಾಪೌಂಡ್ ಒಳಗೆ ಕೂಡಿ ಹಾಕಿ ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದೆ. ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಮ್ಮ ಮನೆಗೆ ಯಾಕೆ ನೀವು ಬಂದಿದ್ದೀರಿ ಎಂದು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡ ನಂದೀಶ್ ಶಿಕ್ಷಕರ ಬಳಿಯಿದ್ದ ಐಡಿ ಕಾರ್ಡ್ ಕಿತ್ತುಕೊಂಡಿದ್ದಾನೆ. ನಂತರ ಅವರನ್ನು ತಮ್ಮ ಮನೆಯ ಕಾಪೌಂಡ್ ಒಳಗೆ ಕೂಡಿಹಾಕಿದ್ದಾನೆ ಎನ್ನಲಾಗಿದೆ.